ಮುಲ್ಕಿ: ಶೀಘ್ರದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಅಭಯಚಂದ್ರ ಭರವಸೆ

ಮುಲ್ಕಿ, ಫೆ.26: ನದಿ ಮತ್ತು ಸಮುದ್ರ ತೀರದಲ್ಲಿರುವ ಕೊಳಚಿಕಂಬಳ ಪ್ರದೇಶಕ್ಕೆ ಸಸಿಹಿತ್ಲು-ಚಿತ್ರಾಪು-ಕೊಳಚಿಕಂಬಳ ಮೂಲಕ ನದಿಗೆ ಸೇತುವೆ ನಿರ್ಮಿಸಿ ಮುಲ್ಕಿಗೆ ನೇರ ಸಂಪರ್ಕ ಕಲ್ಪಿಸುವ ಸ್ಥಳೀಯರ ಬಹು ದಿನದ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಅವರು ಮುಲ್ಕಿಯ ಕೊಳಚಿಕಂಬಳದ ಜಾರಂದಾಯ ದ್ಯೆವಸ್ಥಾನದ ವಠಾರದಲ್ಲಿ ನಡೆದ ಕೊಳಚಿಕಂಬಳ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 8 ನೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಸಮುದಾಯ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮವನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜೀರ್ಣೋದ್ದಾರಗೊಳ್ಳಲಿರುವ ಕೊಳಚಿಕಂಬಳ ಜಾರಂದಾಯ ದೈವಸ್ಥಾನದ ಜೀರ್ಣೋದ್ದಾರದ ಕುರಿತ ವಿಜ್ಞಾಪನಾ ಪತ್ರವನ್ನು ಅದಾನಿ-ಯುಪಿಸಿಎಲ್ ಜಂಟಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾರಂಭದಲ್ಲಿ ಯೋಗ ಗುರು ರಾಘವೇಂದ್ರ ರಾವ್, ಹಿರಿಯ ಸಮಾಜ ಸೇವಕ ನರೇಶ್ ಬಂಗೇರ ಕೊಳಚಿಕಂಬಳ ಮತ್ತು ಅಂತಾರಾಷ್ಟ್ರೀಯ ಸರ್ಫೀಂಗ್ ಪಟು ಕುಮಾರಿ ತನ್ವಿ ಜಗದೀಶ್ ಕೊಳಚಿಕಂಬಳ ಇವರನ್ನು ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಕ್ಷಾ ಪಿ. ಸಾಲ್ಯಾನ್, ದೀಪಿಕಾ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸುರಕ್ಷಾ ಶೆಟ್ಟಿ ಮತ್ತು ಶಿಪಾಲಿ ಅವರಿಗೆ ಸಾನದ ಮನೆ ದಿ. ಹರಿಯಪ್ಪಕೋಟ್ಯಾನ್ ಸ್ಮರಣಾಥ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಜರಗಿದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಮುಲ್ಕಿಯ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಹಳೆಯಂಗಡಿಯ ಜಯ ಕೃಷ್ಣ ಕೋಟ್ಯಾನ್, ಉದ್ಯಮಿ ಹೇಮರಾಜ್ ಅಮೀನ್ ಕೊಳಚಿಕಂಬಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೊಳಚಿಕಂಬಳ ಜಾರಂದಾಯ ದೈವಸ್ಥಾನದ ಗುರಿಕಾರ ಹರಿಶ್ಚಂದ್ರ ಪಿ. ಸಾಲ್ಯಾನ್, ಸಾನದ ಮನೆ ಕೃಷ್ಣ ಆರ್ ಕೋಟ್ಯಾನ್,ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಎಂ ಪ್ರಕಾಶ್ ಸುವರ್ಣ, ಜಾರಂದಾಯ ಧೂಮಾವತಿ ಯೂತ್ ಕ್ಲಬ್‌ನ ಅಧ್ಯಕ್ಷ ಕೃಷ್ಣ ಸುವರ್ಣ, ಜಾರಂದಾಯ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ವಸಂತಿ ಬಂಗೇರ ವೇದಿಕೆಯಲ್ಲಿ ಉಪಸ್ತಿತರಿದ್ದರು.







