ಸುಳ್ಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ಸುಳ್ಯ, ೆ.26: ಸುಳ್ಯ ತಾಲೂಕು 21ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ರಾಗಿ ಲಕ್ಷ್ಮೀಶ ಚೊಕ್ಕಾಡಿ ಆಯ್ಕೆಯಾಗಿದ್ದು, ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲು ಅವರ ನಿವಾಸಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರು ಮತ್ತು ಸ್ವಾಗತ ಸಮಿತಿಯ ಪದಾಕಾರಿಗಳು ಇಂದು ಭೇಟಿ ನೀಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ವಿ.ಹೇಮನಾಥ್, ಕೋಶಾಧ್ಯಕ್ಷ ಸಿ.ಎ.ಗಣೇಶ್ ಭಟ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಪ್ರ.ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು ಮತ್ತು ತೇಜಸ್ವಿ ಕಡಪಾಳ, ಕೋಶಾಕಾರಿ ದಯಾನಂದ ಆಳ್ವ ಮತ್ತಿತರರು ಸಮ್ಮೇಳನದ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ವಿನಂತಿಸಿದರು.
Next Story





