ಮೂಡುಬಿದಿರೆ: ಕಾನ್ಫಿಡೆನ್ಸ್ ಟೆಸ್ಟ್

ಮೂಡುಬಿದಿರೆ, ಫೆ.26: ಎಸ್ಸೆಸ್ಸೆಫ್ ಮೂಡುಬಿದಿರೆ ಡಿವಿಶನ್ ವತಿಯಿಂದ ಎಸೆಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳಿಗಾಗಿ ‘ಕಾನ್ಫಿಡೆನ್ಸ್ ಟೆಸ್ಟ್’ ರವಿವಾರ ಕೈಕಂಬ ಅಸ್ರಾರುದ್ದೀನ್ ಕಂಬಲ್ ಶಾಲೆಯಲ್ಲಿ ನಡೆಯಿತು.
ಡಿವಿಶನ್ ವ್ಯಾಪ್ತಿಯ ಸುಮಾರು ಹದಿನೈದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆಯ ಸದುಪಯೋಗ ಪಡೆದುಕೊಂಡರು. ಪರೀಕ್ಷಾಧಿಕಾರಿಗಳಾಗಿ ಶಾಫಿ ಮಾಸ್ಟರ್ ಬಜ್ಪೆ, ಸಾದಿಕ್ ಮಾಸ್ಟರ್ ಸುಳ್ಯ, ಸವಾದ್ ಮಾಸ್ಟರ್ ಕಾರ್ಯನಿರ್ವಹಿಸಿದರು. ಅಸ್ರಾರುದ್ದೀನ್ ಅರೆಬಿಕ್ ಕಾಲೇಜು ಪ್ರಾಂಶುಪಾಲ ಬದ್ರುದ್ದೀನ್ ಅಝ್‌ಹರಿ ಕೈಕಂಬ, ಮಜ್ಲಿಸ್ ಗಾಣೆಮಾರ್ ಅಧ್ಯಕ್ಷ ಹಾಫಿಳ್ ಮಜೀದ್ ಫಾಳಿಲಿ ಭೇಟಿ ನೀಡಿ ಪರಿಶೀಲಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೈಕಂಬ ಸೆಕ್ಟರ್ ಅಧ್ಯಕ್ಷ ರಿಯಾಝ್ ಸ
ಅದಿ ವಹಿಸಿದ್ದರು. ಎ.ಕೆ.ಯು. ಪ್ರಾಂಶುಪಾಲ ಓಶ್ ರೊಡ್ರಿಗಸ್ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಯ ಬಗ್ಗೆ ಮಾರ್ಗದರ್ಶನ ನೀಡಿದರು. ಸವಾದ್ ಉದ್ದಬೆಟ್ಟು ಮುನ್ನುಡಿ ಭಾಷಣ ಮಾಡಿದರು. ಈ ಸಂದರ್ಭ ಎ.ಕೆ.ಯು. ಶಾಲೆಗೆ ಎಸ್ಸೆಸ್ಸೆಫ್ ವತಿಯಿಂದ ಸ್ಮರಣಿಕೆ ನೀಡಲಾಯಿತು. ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಶಾಕಿರ್ ಎಮ್ಮೆಸ್ಸಿ ಸ್ವಾಗತಿಸಿದರು. ಅಧ್ಯಕ್ಷ ಹಮೀದ್ ವರಕೋಡಿ ವಂದಿಸಿದರು.





