ಯುವರಾಜ್ ಶೂನ್ಯ ಸಂಪಾದನೆ: ಪಂಜಾಬ್‌ಗೆ ಸೋಲು
ಮುಂಬೈ,ಫೆ.26: ವಿಜಯ್ ಹಝಾರೆ ಟ್ರೋಫಿಯ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಹಿರಿಯ ಆಟಗಾರ ಯುವರಾಜ್ ಸಿಂಗ್ ಶೂನ್ಯ ಸಂಪಾದಿಸಿದ್ದು, ಪಂಜಾಬ್ ತಂಡ ಅಸ್ಸಾಂನ ವಿರುದ್ಧ 3 ವಿಕೆಟ್‌ಗಳ ಅಂತರದಿಂದ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 49.4 ಓವರ್‌ಗಳಲ್ಲಿ 243 ರನ್ ಗಳಿಸಿತು. ಗೆಲ್ಲಲು ಸವಾಲಿನ ಮೊತ್ತ ಪಡೆದಿದ್ದ ಅಸ್ಸಾಂ ತಂಡದ ಪರ ಅರುಣ್ ಕಾರ್ತಿಕ್(63) ಹಾಗೂ ಅಮಿತ್ ವರ್ಮ(65) ಅರ್ಧಶತಕ ಗಳಿಸಿ 48.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಲು ನೆರವಾದರು.
ಪಂಜಾಬ್ ತಂಡ ಅಂಡರ್-19 ಆಟಗಾರ ಶುಭಂ ಗಿಲ್(121 ರನ್, 129 ಎಸೆತ, 11 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದ ಬೆಂಬಲದಿಂದ 243 ರನ್ ಗಳಿಸಿತ್ತು. ಗಿಲ್ ಹಾಗೂ ಗುರುಕೀರತ್ ಸಿಂಗ್(58) 4ನೆ ವಿಕೆಟ್‌ಗೆ 141 ರನ್ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
Next Story





