Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ27 Feb 2017 12:11 AM IST
share

ಬಿಜೆಪಿಯವರಿಗೆ ಸುಳ್ಳು ಹೇಗೆ ಹೇಳಬೇಕೆಂದು ತರಬೇತಿ ನೀಡಲಾಗಿದೆ
- ಸಿದ್ದರಾಮಯ್ಯ, ಮುಖ್ಯಮಂತ್ರಿ
  ಮುಖ್ಯಮಂತ್ರಿ ಮಾಡುವ ಕೆಲಸ ಬಿಟ್ಟು, ಹೀಗೆಲ್ಲ ತರಬೇತಿ ನೀಡುತ್ತಾ ಹೋದರೆ ನಾಡಿನ ಗತಿ ಏನು?
---------------------

ಪಳನಿಸ್ವಾಮಿಗೆ ಸಿಎಂ ಪಟ್ಟ ಸಂಘಟಿತ ಅಪರಾಧ
-ಕಮಲ ಹಾಸನ್, ನಟ
 ಹಾಸನ್ ಹಿಂದೆ ಕಮಲ ಇರುವುದೇ ಈ ಹೇಳಿಕೆಗೆ ಕಾರಣ ಎನ್ನುವುದು ಶಶಿಕಲಾ ಆರೋಪ.

---------------------
  ಬರೀ ಸುಳ್ಳು ಸುದ್ದಿಗಳನ್ನೇ ಪ್ರಕಟಿಸುವ ಅಮೆರಿಕ ಮಾಧ್ಯಮಗಳ ಬಣ್ಣ ಬಯಲು ಮಾಡುತ್ತೇನೆ

 -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕದ ಬಣ್ಣವನ್ನಂತೂ ನೀವು ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದೀರಿ.

---------------------
  ಬಾಯಲ್ಲಿ ಬೆಳ್ಳಿ ಚಮಚ ಇರಿಸಿಕೊಂಡು ಹುಟ್ಟಿದವರಿಗೆ ಬಡವರ ಕಷ್ಟ ಅರ್ಥ ವಾಗುವುದಿಲ್ಲ
-ನರೇಂದ್ರ ಮೋದಿ, ಪ್ರಧಾನಿ
  ನೀವು ಬಾಯಿಯಲ್ಲಿ ಮನುಷ್ಯರ ಎಲುಬು ಇರಿಸಿಕೊಂಡು ಹುಟ್ಟಿದವರೇ ಎಂಬ ಅನುಮಾನ.

---------------------
  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ತಲೆ ಸರಿಯಿಲ್ಲ
- ಅರವಿಂದ್ ಲಿಂಬಾವಳಿ, ಬಿಜೆಪಿ ವಕ್ತಾರ
  ಒಟ್ಟಿನಲ್ಲಿ ಜೈಲುಗಳ ಜೊತೆಗೆ ಮಾನಸಿಕ ಆಸ್ಪತ್ರೆಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ.

---------------------
  ನೋಟು ಅಮಾನ್ಯವೆಂಬುದು ಅನಾರೋಗ್ಯಕ್ಕೆ ಚಿಕಿತ್ಸೆ ಕೊಡುವಂತಹ ಕಹಿಯಾದ ಔಷಧವಾಗಿತ್ತು

 -ಎಂ.ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ಇನ್ನು ಅದನ್ನು ನೀವೇ ಕುಡಿಯಬೇಕಾಗುತ್ತದೆ, ಕಾದು ನೋಡಿ.

---------------------
  ಇಂಗ್ಲಿಷ್ ಕಲಿಕೆಗೆ ಪ್ರಾಧಾನ್ಯತೆ ನೀಡುವುದರಿಂದ ಮಕ್ಕಳ ಆಲೋಚನೆ ಮತ್ತು ಭಾವನಾ ಶಕ್ತಿ ಹತ್ಯೆ ಮಾಡಿದಂತಾಗುತ್ತದೆ

  - ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ

ಕನ್ನಡ ಕಲಿತು ನಿಮ್ಮ ಕಾದಂಬರಿ ಓದುವ ಅಪಾಯದಿಂದಲಾದರೂ ಇಂಗ್ಲಿಷ್ ಮೀಡಿಯಂ ಮಕ್ಕಳು ಪಾರಾಗುತ್ತಾರಲ್ಲ?
---------------------
  ಸತ್ತೇನು ಆದರೆ ಬಿಜೆಪಿ, ಆರೆಸ್ಸೆಸ್‌ನೊಂದಿಗೆ ಕೈಜೋಡಿಸಲಾರೆ
-ಲಾಲು ಪ್ರಸಾದ್ ಯಾದವ್, ಜೆಡಿಯು ಮುಖ್ಯಸ್ಥ
    ಕಾಲು ಜೋಡಿಸಿದರೆ ಆಯಿತು ಬಿಡಿ.

--------------------------------------------

ಸಾಧನೆ ಮೂಲಕವೇ ದೇಶಾದ್ಯಂತ ಬಿಜೆಪಿಗೆ ಗೆಲುವು

  - ನಳಿನ್ ಕುಮಾರ್ ಕಟೀಲು, ಸಂಸದ ಬೆಂಕಿ ಹಚ್ಚುವುದು ತಮ್ಮ ಸಾಧನೆಯ ಭಾಗವೇ?

  ---------------------

ರಾಜ್ಯ ಸರಕಾರ ಹೈಕಮಾಂಡ್‌ಗೆ ದುಡ್ಡು ನೀಡುವ ಮರ
-ಶೋಭಾ ಕರಂದ್ಲಾಜೆ, ಸಂಸದೆ
  ತಮ್ಮ ಆಡಳಿತ ಕಾಲದಲ್ಲಿ ನಾಡನ್ನು ದುಡ್ಡು ಬಗೆಯುವ ಅಕ್ರಮ ಗಣಿಗಾರಿಕೆಯಾಗಿ ಪರಿವರ್ತಿಸಿದ್ದು ನೆನಪಿದೆಯೇ?
---------------------
  ಒಂದು ವೇಳೆ ಮಹಾತ್ಮಾ ಗಾಂಧಿ ಬದುಕಿದ್ದಿದ್ದರೆ ಇಂದಿನ ಕಾಂಗ್ರೆಸ್ ವಿರುದ್ಧವೇ ಹೋರಾಟ ನಡೆಸುತ್ತಿದ್ದರು
- ಸಿ.ಟಿ.ರವಿ, ಶಾಸಕ 
  ಅದಕ್ಕಾಗಿ ಆರೆಸ್ಸೆಸ್ ಅವರನ್ನು ಕೊಂದು ಹಾಕಿತೇ?
---------------------
 ಮನುಷ್ಯ ಬಹಳ ವಿಚಿತ್ರ ಆಸಾಮಿ

 -ಬಾಬಾರಾಮ್‌ದೇವ್, ಯೋಗ ಗುರು

ಕನ್ನಡಿ ನೋಡಿದಾಗ ಹೊಳೆದದ್ದಿರಬೇಕು.

---------------------
   ನರೇಂದ್ರ ದಾಮೋದರ ದಾಸ್ ಮೋದಿ ಅಂದರೆ ನಗೆಟಿವ್ ದಲಿತ ಮ್ಯಾನ್
- ಮಾಯಾವತಿ, ದಲಿತ್ ಮುಖ್ಯಸ್ಥೆ
  ಕನಿಷ್ಠ ನೀವಾದರೂ ಪೋಸಿಟಿವ್ ದಲಿತ್ ವುಮನ್ ಆಗಲು ಯತ್ನಿಸಿ.

---------------------
  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಜೈಲಿಗೆ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ತಾವು ಮತ್ತೆ ಜೈಲು ಸೇರುವುದಾಗಿ ಭರವಸೆ ನೀಡಿದರೆ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ.

---------------------
  ದ.ಕ.ದಲ್ಲಿ ನೀರಿಗೇ ಬೆಂಕಿ ಹಾಕುವವರಿದ್ದಾರೆ
-ಯು.ಟಿ.ಖಾದರ್, ಸಚಿವ
  ದುರ್ಬಲ ಸರಕಾರ ಅಸ್ತಿತ್ವದಲ್ಲಿದ್ದಾಗ ಅಂತಹ ಆಲೋಚನೆಗಳೆಲ್ಲ ಅವರಲ್ಲಿ ಬರುವುದು ಸಹಜ.

---------------------
  ಮಂಡ್ಯದ ಗಂಡಷ್ಟೇ ಅಲ್ಲ, ಸದ್ಯದಲ್ಲೇ ಮಂಡ್ಯದ ಹೆಣ್ಣು ಕೂಡ ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ
- ಕೆ.ಎಸ್.ಈಶ್ವರಪ್ಪ, ವಿ.ಪ.ವಿ. ನಾಯಕ
  ನೀವು ಯಾವಾಗ ಹೊರ ಹೋಗುವುದು ಎನ್ನುವುದನ್ನು ಬಿಜೆಪಿಯ ಮುಖಂಡರೊಬ್ಬರು ಕಾಯುತ್ತಿರುವುದನ್ನು ಮರೆತಿರಾ?
---------------------
  ಎಮ್ಮೆ ಹುಡುಕುವವರಿಗೆ ಕತ್ತೆ ಕೆಟ್ಟದಾಗಿ ಕಾಣುತ್ತೆ
-ನರೇಂದ್ರ ಮೋದಿ,ಪ್ರಧಾನಿ
ನಿಮ್ಮನ್ನು ನೋಡುವಾಗ ಕತ್ತೆ ಅಷ್ಟೇನೂ ಕೆಟ್ಟದಾಗಿ ಕಾಣುವುದಿಲ್ಲ, ಬಿಡಿ.

---------------------
  ನಾನು ಧರ್ಮಸ್ಥಳಕ್ಕೆ ಹೋಗಿ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಬಂದೆ
-ಐವನ್ ಡಿಸೋಜಾ, ವಿ.ಪ.ಮುಖ್ಯ ಸಚೇತಕ
  ಕಾಂಗ್ರೆಸ್‌ಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬಾರದಿತ್ತೇ?
---------------------
  ಕಾಂಗ್ರೆಸ್ ಮುಕ್ತ ಕರ್ನಾಟಕ ನಿಮ್ಮ(ಬಿಜೆಪಿ) ಜನ್ಮದಲ್ಲಿ ಸಾಧ್ಯವಿಲ್ಲ
- ಡಾ.ಜಿ.ಪರಮೇಶ್ವರ್, ಗೃಹಸಚಿವ
ಅದಕ್ಕೆ ಆ ಜವಾಬ್ದಾರಿ ನಿಮ್ಮಂತಹ ನಾಯಕರಿಗೆ ವಹಿಸಿರುವುದು.

---------------------
  ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
 ತಮ್ಮ ಮುಳುಗಿದ ಹಡಗಿನ ಬಗ್ಗೆ ಏನಾದರೂ ಹೇಳಿ.

---------------------
  ನಾನು ಒಂದು ರೂಪಾಯಿ ಕೂಡಾ ದುರ್ಬಳಕೆ ಮಾಡಿಕೊಂಡಿಲ್ಲ
-ವಿಜಯ ಮಲ್ಯ, ಉದ್ಯಮಿ
ಉಳಿದ ರೂಪಾಯಿಗಳನ್ನು ಏನು ಮಾಡಿದಿರಿ ಎಂದು ಹೇಳಿ.

---------------------
  ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ
-ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ
ನಿಮ್ಮಂಥವರನ್ನು ಇನ್ನೂ ಪಕ್ಷದಲ್ಲಿ ಉಳಿಸಿಕೊಂಡಿರುವುದೇ ಅದಕ್ಕೆ ಸಾಕ್ಷಿ.

---------------------
  ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕೊಟ್ಟಿರಬಹುದು
-ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡ
 ಇದನ್ನು ಹೇಳಲು ಬಿಜೆಪಿ ನಿಮಗೆ ಕೊಟ್ಟಿರುವ ಕಪ್ಪ ಎಷ್ಟಿರಬಹುದು?
---------------------
  ಅಮ್ಮನ ಆತ್ಮ ನಮಗೆ ಮಾರ್ಗದರ್ಶನ ಮಾಡುತ್ತಿದೆ
-ವಿ.ಕೆ.ಶಶಿಕಲಾ, ಎಐಡಿಎಂಕೆ ಪ್ರ.ಕಾರ್ಯದರ್ಶಿ
 ಹಾಗಾದರೆ ಸಂವಿಧಾನದ ಮಾರ್ಗದರ್ಶನದ ಅಗತ್ಯ ನಿಮಗಿಲ್ಲವೇ?

share
ಪಿ.ಎ.ರೈ
ಪಿ.ಎ.ರೈ
Next Story
X