Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ

ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ

ವಾರ್ತಾಭಾರತಿವಾರ್ತಾಭಾರತಿ27 Feb 2017 12:21 AM IST
share

ಮಹಾಭಾರತ ಯುದ್ಧದಲ್ಲಿ ದುರ್ಯೋಧನ ಅತಿರಥ ಮಹಾರಥರನ್ನೆಲ್ಲ ತನ್ನ ಪಕ್ಷದಲ್ಲಿ ಇಟ್ಟುಕೊಂಡಿದ್ದ. ಭೀಷ್ಮ, ದ್ರೋಣ, ಶಲ್ಯ ಮೊದಲಾದವರಿದ್ದೂ, 14 ಅಕ್ಷೋಹಿಣಿ ಸೈನ್ಯಗಳಿದ್ದೂ ಅಂತಿಮವಾಗಿ ಆತ ಎಲ್ಲವನ್ನು ಕಳೆದುಕೊಂಡು ವೈಶಂಪಾಯನ ಸರೋವರದಲ್ಲಿ ಅಡಗಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಕೌರವನ ಬಳಿ ಹಿರಿಯರೇನೋ ಇದ್ದರು. ಆದರೆ ಅವರೆಲ್ಲ ಆಳದಲ್ಲಿ ಪಾಂಡವರ ಮೇಲೆ ಒಲವುಳ್ಳವರು. ಮೊದಲ ಪರ್ವದಲ್ಲಿ ತನ್ನ ಸೈನ್ಯವನ್ನು ಅರ್ಧಕ್ಕರ್ಧ ನಾಶ ಮಾಡಲು ಅವಕಾಶ ಮಾಡಿಕೊಟ್ಟು ಪಾಂಡವರ ಗೆಲುವಿಗೆ ಭೀಷ್ಮ ಪಿತಾಮಹರೇ ಸಹಕರಿಸುತ್ತಾರೆ. ಒಂದೆಡೆ ಈ ಹಿರಿಯರನ್ನು ಪಕ್ಕಕ್ಕಿಟ್ಟು ಯುವಕರಿಗೆ ದಳಪತಿಯ ಹುದ್ದೆಯನ್ನು ನೀಡುವಂತಿಲ್ಲ. ನೀಡಿದರೆ ಇವರ ವಿರೋಧವನ್ನು, ಅವಕೃಪೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದು ಪಾಳಯದ ನೈತಿಕ ಸ್ಥೈರ್ಯದ ಮೇಲೆ ಪರಿಣಾಮಬೀರುತ್ತದೆ. ಸರಿ ಇವರಾದರೂ ಪೂರ್ಣ ಮನಸ್ಸಿನಿಂದ ಯುದ್ಧ ಮಾಡುತ್ತಾರೆಯೋ ಎಂದರೆ ಅದೂ ಇಲ್ಲ. ಇದರಿಂದಾಗಿ ಎಲ್ಲ ಶಕ್ತಿ, ಸಾಮರ್ಥ್ಯವಿದ್ದೂ ಕೌರವರು ಯುದ್ಧದಲ್ಲಿ ಸರ್ವನಾಶವಾಗಬೇಕಾಯಿತು.

ಕೌರವನಿಗೆ ಮೋಸ ಮಾಡಿದ ಈ ಹಿರಿಯರ ದೆಸೆಯಿಂದಲೇ ಇಂದಿಗೂ ಕನ್ನಡದಲ್ಲಿ ಒಂದು ಗಾದೆಯಿದೆ ‘‘ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ’ ಎಂದು. ಕೌರವ ನೀಡುವ ಊಟವನ್ನೇ ಮಾಡಿದ್ದರೂ, ಈ ಹಿರಿಯರು ಆಳದಲ್ಲಿ ಪಾಂಡವರ ಪಕ್ಷದಲ್ಲೇ ನಿಂತು ಮಾತನಾಡುತ್ತಿದ್ದರು. ಇದು ಇಂದಿನ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಹೆಚ್ಚು ಸೂಕ್ತವಾಗಿ ಅನ್ವಯಿಸುತ್ತದೆ. ಕಾಂಗ್ರೆಸ್ ಪಕ್ಷದೊಳಗೆ ಇದ್ದುಕೊಂಡೇ, ಅದರಿಂದ ಅಧಿಕಾರ, ಸಂಪತ್ತನ್ನೂ ತನ್ನದಾಗಿಸಿಕೊಂಡೇ ಮಾನಸಿಕವಾಗಿ ಬಿಜೆಪಿಯನ್ನು ಬೆಂಬಲಿಸುವ ಹಿರಿಯರು ಕಾಂಗ್ರೆಸ್‌ನ ಅವನತಿಗೆ ಕಾರಣವಾಗಿದ್ದಾರೆ. ಇದೀಗ ಅಂತಹ ಹಿರಿಯರ ಸಾಲಿಗೆ ಹೊಸತೊಂದು ಸೇರ್ಪಡೆಯಾಗಿದೆ, ಅವರ ಹೆಸರು ಶೀಲಾ ದೀಕ್ಷಿತ್.

ಯುದ್ಧ ನಡೆಯುತ್ತಿರುವಾಗಲೇ ರಣರಂಗದಲ್ಲಿ ಕರ್ಣನಿಗೆ ಕಾಟಕೊಡುವ ಸಾರಥಿ ಶಲ್ಯನಂತೆ ರಾಹುಲ್‌ ಗಾಂಧಿಗೆ ಸ್ವತಃ ಸೇನಾನಾಯಕಿಯೇ ಕಾಟ ಕೊಡಲು ಆರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ, ಟಿವಿ ವಾಹಿನಿಯೊಂದರ ಜೊತೆಗೆ ಮಾತನಾಡುತ್ತಾ, ರಾಹುಲ್ ಗಾಂಧಿ ಅವರು ಇನ್ನೂ ಪ್ರಬುದ್ಧರಾಗಿಲ್ಲ, ಅವರಿಗೆ ನಾವು ಪ್ರಬುದ್ಧರಾಗಲು ಅವಕಾಶ ಕೊಡಬೇಕಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ವಿರೋಧ ಪಕ್ಷದವರು ನೀಡಿದ್ದಿದ್ದರೆ ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವೇ ಇದ್ದಿರಲಿಲ್ಲ. ಆದರೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ನಾಯಕತ್ವವನ್ನು ವಹಿಸಿಕೊಂಡ ಶೀಲಾ ದೀಕ್ಷಿತ್ ಅವರಿಂದಲೇ ಈ ಹೇಳಿಕೆ ಹೊರ ಬಿದ್ದಿರುವುದು ಕಾಂಗ್ರೆಸ್ ಪಾಳಯದೊಳಗೆ ತೀವ್ರ ಮುಜುಗರವನ್ನು ಸೃಷ್ಟಿಸಿದೆ. ಇದೊಂದು ಆಕಸ್ಮಿಕ ಹೇಳಿಕೆಯೋ ಅಥವಾ ಟಿವಿ ವಾಹಿನಿಯವರು ದೀಕ್ಷಿತ್ ಅವರ ಹೇಳಿಕೆಯನ್ನು ತಿರುಚಿದ್ದಾಗಿದ್ದರೆ ಬೇರೆ ಪ್ರಶ್ನೆ. ಈ ಹೇಳಿಕೆ ದೀಕ್ಷಿತ್ ಅವರಿಂದ ಹೊರ ಬಿದ್ದ ಮರುಕ್ಷಣವೇ ವಿರೋಧಪಕ್ಷದ ಅದರಲ್ಲೂ ಬಿಜೆಪಿಯ ನಾಯಕರು ಸಂಭ್ರಮಪಟ್ಟಿದ್ದಾರೆ. ‘‘ಅಪ್ರಬುದ್ಧ ನಾಯಕನ ಕೈಗೆ ಯಾಕೆ ಪಕ್ಷವನ್ನು ಕೊಟ್ಟಿದ್ದೀರಿ. ಅವರನ್ನು ಮನೆಯಲ್ಲಿ ಕೂರಿಸಿ’’ ಇತ್ಯಾದಿ ಹೇಳಿಕೆಗಳು ಪುಂಖಾನುಪುಂಖವಾಗಿ ಹೊರ ಬೀಳುತ್ತಿವೆ. ಇದೀಗ ದೀಕ್ಷಿತ್ ಅವರು ‘ರಾಹುಲ್ ಪ್ರಬುದ್ಧ ನಾಯಕನಿಗಿರುವ ಸಂವೇದನಾಶೀಲತೆಯನ್ನು ಹೊಂದಿದ್ದಾರೆ’’ ಎಂದು ತಿದ್ದಿ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ನೀಡಿರುವ ಹೇಳಿಕೆಯನ್ನು ಅವರು ಪ್ರಬಲವಾಗಿ ಅಲ್ಲಗಳೆದ ವರದಿ ಈವರೆಗೆ ಬಂದಿಲ್ಲ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಬೇರನ್ನು ಇಳಿಸಲು ಹಲವು ದಶಕಗಳಿಂದ ಹೋರಾಟ ನಡೆಸುತ್ತಲೇ ಬರುತ್ತಿದೆಯಾದರೂ, ಅದು ಫಲ ನೀಡಿಲ್ಲ. ಈ ಬಾರಿ, ಸಮಾಜವಾದಿ ಪಕ್ಷ ಅದರಲ್ಲೂ ಅಖಿಲೇಶ್ ಜೊತೆಗೆ ರಾಹುಲ್ ಕೈ ಜೋಡಿಸಿರುವುದು ಪಕ್ಷಕ್ಕೆ ಒಂದಿಷ್ಟು ಆಶಾವಾದವನ್ನು ತಂದುಕೊಟ್ಟಿದೆ. ಅಖಿಲೇಶ್ ಮತ್ತು ರಾಹುಲ್‌ಗಾಂಧಿ ಉತ್ತರಪ್ರದೇಶಾದ್ಯಂತ ಬಿರುಸಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಇದಕ್ಕಿಂತ ಅತ್ಯುತ್ತಮವಾದ ರಾಜಕೀಯ ಆಯ್ಕೆ ಬೇರೆ ಇಲ್ಲ. ಇಂತಹ ಹೊತ್ತಿನಲ್ಲಿ ಶೀಲಾ ದೀಕ್ಷಿತ್ ಅವರು ರಾಹುಲ್‌ಗಾಂಧಿಯ ವರ್ಚಸ್ಸಿಗೆ ಧಕ್ಕೆಯಾಗುವಂತಹ ಹೇಳಿಕೆಯನ್ನು ನೀಡುವ ಅಗತ್ಯವಿತ್ತೇ? ಅಂದರೆ ಸದ್ಯದ ಉತ್ತರ ಪ್ರದೇಶದ ರಾಜಕೀಯ ಬೆಳವಣಿಗೆಗಳು ಶೀಲಾದೀಕ್ಷಿತ್‌ಗೆ ಅಸಮಾಧಾನವನ್ನು ತಂದಿದೆಯೆ ಎಂಬ ಪ್ರಶ್ನೆ ಮಹತ್ವವನ್ನು ಪಡೆಯುತ್ತದೆ. ಕಾಂಗ್ರೆಸ್‌ನ ಸಕಲ ಸವಲತ್ತುಗಳನ್ನು ಅನುಭವಿಸಿ, ದಿಲ್ಲಿಯಲ್ಲಿ ಕಾಂಗ್ರೆಸನ್ನು ಸರ್ವನಾಶ ಮಾಡಿದ ಹಿರಿಯ ನಾಯಕಿ, ಇದೀಗ ಕಾಂಗ್ರೆಸ್ ವಿರುದ್ಧ ಮೆಲ್ಲಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ಪಕ್ಷವು ಉತ್ತರಪ್ರದೇಶದ ನೇತೃತ್ವವನ್ನು ಶೀಲಾ ದೀಕ್ಷಿತ್‌ಗೆ ನೀಡಿತು. ಶೀಲಾದೀಕ್ಷಿತ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆ. ತಳಸ್ತರಗಳಲ್ಲಿ ಬ್ರಾಹ್ಮಣ ಸಂಘಟನೆಗಳ ಜೊತೆ ಸಂಬಂಧವನ್ನು ಇಟ್ಟುಕೊಂಡವರು ದೀಕ್ಷಿತ್. ಉತ್ತರ ಪ್ರದೇಶದಲ್ಲಿ ಗೆಲುವಿಗೆ ಬ್ರಾಹ್ಮಣರ ಮತಗಳೇ ನಿರ್ಣಾಯಕವಾಗುವುದರಿಂದ ಶೀಲಾದೀಕ್ಷಿತ್‌ರನ್ನು ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿತು. ಆದರೆ ತದನಂತರದ ರಾಜಕೀಯ ಬೆಳವಣಿಗೆಗಳಲ್ಲಿ ರಾಹುಲ್ ಮತ್ತು ಅಖಿಲೇಶ್ ಒಂದಾದರು. ಶೀಲಾ ದೀಕ್ಷಿತ್ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಯಿತು ಮಾತ್ರವಲ್ಲ, ‘‘ತನಗಿಂತ ಅಖಿಲೇಶ್ ಅತ್ಯುತ್ತಮ ಮುಖ್ಯಮಂತ್ರಿ’’ ಎಂಬ ಹೇಳಿಕೆಯನ್ನು ದೀಕ್ಷಿತ್ ನೀಡಬೇಕಾಯಿತು. ಇದೀಗ ಉತ್ತರಪ್ರದೇಶ ಚುನಾವಣೆ ಸಂಪೂರ್ಣ ಗಾಂಧಿ ಕುಟುಂಬದ ನೇತೃತ್ವದಲ್ಲೇ ನಡೆಯುತ್ತಿದೆ. ಇದು ಸಹಜವಾಗಿಯೇ ಶೀಲಾದೀಕ್ಷಿತ್‌ಗೆ ಅಸಮಾಧಾನ ತಂದಿದೆ. ಈಗಾಗಲೇ ರಾಜಕೀಯವಾಗಿ ಸಂಪೂರ್ಣವಾಗಿ ಮೂಲೆಗುಂಪಾಗಿರುವ ಶೀಲಾದೀಕ್ಷಿತ್ ರಾಹುಲ್‌ಗಾಂಧಿಯ ವಿರುದ್ಧ ಗೊಂದಲಕಾರಿ ಹೇಳಿಕೆಯನ್ನು ನೀಡಿ, ಅವರೆಲ್ಲರ ಗಮನವನ್ನು ತನ್ನೆಡೆಗೆ ಸೆಳೆದಿದ್ದಾರೆ. ಈ ಹೇಳಿಕೆ ನೇರವಾಗಿ ಬಿಜೆಪಿಗೆ ಸಹಾಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಹುಲ್‌ಗಾಂಧಿ ಪ್ರಬುದ್ಧ ನಾಯಕನಾಗುವುದಕ್ಕೆ ಅವಕಾಶ ಕೊಡಬೇಕು ಎಂದು ದೀಕ್ಷಿತ್ ಹೇಳಿದ್ದಾರೆ. ಆದರೆ ಆ ಅವಕಾಶವನ್ನು ಕೊಡಬೇಕಾದವರು, ಪಕ್ಷದೊಳಗಿರುವ ಹಿರಿಯ, ವೃದ್ಧ ನಾಯಕ, ನಾಯಕಿಯರು. ತಾವು ರಾಜಕೀಯದಿಂದ ನಿವೃತ್ತರಾಗಿ, ರಾಹುಲ್‌ಗಾಂಧಿಗೆ ರಾಜಕೀಯವಾಗಿ ಮುನ್ನಡೆಯಲು ಅವಕಾಶ ನೀಡಬೇಕು. ಆದರೆ ಇಂದು ನಡೆಯುತ್ತಿರುವುದು ತದ್ವಿರುದ್ಧ. ಕಾಂಗ್ರೆಸ್‌ನ ಉಪ್ಪುಂಡು ಬೆಳೆದ ಹಿರಿಯರೆಲ್ಲ, ಕಾಂಗ್ರೆಸ್‌ಗೆ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ರಾಹುಲ್‌ಗಾಂಧಿಗೆ ಪರೋಕ್ಷ ತೊಡಕಾಗಿರುವುದೂ ಇವರೇ ಆಗಿದ್ದಾರೆ. ಒಂದು ರೀತಿಯಲ್ಲಿ ಶೀಲಾ ದೀಕ್ಷಿತ್ ಹೇಳಿರುವುದು ನಿಜ. ರಾಹುಲ್ ಗಾಂಧಿ ಪ್ರಬುದ್ಧರಾಗಬೇಕಾಗಿದೆ. ಹಾಗೆ ಪ್ರಬುದ್ಧರಾಗಿ, ಶೀಲಾದೀಕ್ಷಿತ್, ಎಸ್. ಎಂ. ಕೃಷ್ಣರಂತಹ ಹಿರಿಯ ನಾಯಕರಿಗೆ ಪಕ್ಷದಲ್ಲಿ ಶಾಶ್ವತ ನಿವೃತ್ತಿಯನ್ನು ನೀಡಬೇಕು. ಜೊತೆಗೆ, ಕಾಂಗ್ರೆಸ್‌ನೊಳಗಿರುವ ಇನ್ನಿತರ ಯುವ ನಾಯಕರಿಗೆ ಮಣೆ ಹಾಕಿ, ಅದಕ್ಕೆ ಪುನರುಜ್ಜೀವ ನೀಡಬೇಕು. ಇಲ್ಲವಾದರೆ, ಈ ವೃದ್ಧ ನಾಯಕರೆಲ್ಲ ಸೇರಿ, ಯುದ್ಧ ನಡೆಯುತ್ತಿರುವಾಗಲೇ, ಅರ್ಧದಲ್ಲೇ ರಥದಿಂದ ಇಳಿದು, ತಮ್ಮ ನಾಯಕರನ್ನು ಶತ್ರುವಿಗೆ ಬಲಿಕೊಡುವುದರಲ್ಲಿ ಸಂಶಯವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X