ವಿಯೋಲಾ ಡೇವಿಸ್, ಮಹೆರ್ಶಾಲಾ ಅಲಿಗೆ ಆಸ್ಕರ್ ಗೌರವ

ಲಾಸ್‌ಎಂಜಲೀಸ್, ಫೆ.27: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್ ತವರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು ಇಡೀ ವಿಶ್ವದ ದೃಷ್ಟಿ ಈ ಮಾಯಾನಗರಿಯತ್ತ ನೆಟ್ಟಿದೆ. ಮೂನ್‌ಲೈಟ್ ಚಿತ್ರದ ಡ್ರಗ್ ಡೀಲರ್ ಪಾತ್ರದಲ್ಲಿ ಮಿಂಚಿದ್ದ ಮಹೆರ್ಶಾಲಾ ಅಲಿ ಅತ್ಯುತ್ತಮ ಪೋಷಕ ನಟ ಗೌರವಕ್ಕೆ ಪಾತ್ರರಾಗಿದ್ದಾರೆ.
ಲಾ ಲಾ ಲ್ಯಾಂಡ್ 14 ಆಸ್ಕರ್ ಚಿತ್ರಗಳಿಗೆ ನಾಮಕರಣಗೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಆಲ್ ಅಬೌಟ್ ಈವ್, ಟೈಟಾನಿಕ್ ಚಿತ್ರಗಳ ಸಾಲಿಗೆ ಇದು ಸೇರಿದೆ. ಅರೈವಲ್ ಹಾಗೂ ಮೂನ್‌ಲೈಟ್ ಎಂಟು ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮಕರಣಗೊಂಡಿದ್ದವು.
ವೋಲಾ ಡೇವಿಸ್ ಫೆನ್ಸಸ್ ಚಿತ್ರದ ರೋಸ್ ಮ್ಯಾಕ್ಸಾನ್ ಪಾತ್ರಕ್ಕಾಗಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಮೂರು ಆಸ್ಕರ್ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಆಫ್ರಿಕನ್ ಮೂಲದ ಅಮೆರಿಕನ್ ನಟಿ ಎನಿಸಿಕೊಂಡಿದ್ದಾರೆ.
ಉತ್ತಮ ವಸ್ತ್ರಾಲಂಕಾರಕ್ಕೆ ಕೋಲೆನ್ ಅಟ್‌ವೂಡ್ ಪ್ರಶಸ್ತಿ ಗೆದ್ದಿದ್ದು, ಫೆಂಟಾಸ್ಟಿಕ್ ಬೀಟ್ಸ್ ಅಂಡ್ ವೇರ್ ಟೂ ಫೈಂಡ್ ದೆಮ್ ಚಿತ್ರಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಉತ್ತಮ ಪ್ರಸಾದನ ಹಾಗೂ ಕೇಶಾಲಂಕಾರಕ್ಕೆ ಅಲೆಸ್ಸಾಂಡ್ರೊ ಬೆರ್ಟೊಲಜಿ, ಜಾರ್ಜಿಯೊ ಗ್ರೆಗೊರಿನಿ ಹಾಗೂ ಕ್ರಿಸ್ಟೋಪರ್ ನೆಲ್ಸನ್ ಪಾತ್ರರಾಗಿದ್ದು, ಸುಸೈಡ್ ಸ್ಕ್ಯಾಡ್ ಚಿತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.
ಉತ್ತಮ ಸಾಕ್ಷ್ಯಚಿತ್ರ- ಓಜೆ: ಮೇಡ್ ಇನ್ ಅಮೆರಿಕ
ಉತ್ತಮ ಶಬ್ದ ಸಂಕಲನ- ಸಿಲ್ವಿಯನ್ ಬೆಲ್ಲೆಮರ್- ಅರೈವಲ್
ಉತ್ತಮ ಶಬ್ದ ಮಿಕ್ಸಿಂಗ್- ಕೆವಿನ್ ಒಕೊನೆಲ್, ಆಂಡಿ ರೈಟ್, ಟಾಬರ್ಟ್ ಮೆಕೆಂಜಿವ ಹಾಗೂ ಫಿಟರ್ ಗ್ರೇಸ್- ಹ್ಯಾಕ್‌ಶೋ ರಿಡ್ಜ್







