ಸಿಪಿಎಂ ಕಚೇರಿಗೆ ಬೆಂಕಿ ಪ್ರಕರಣ: ಮೂವರು ಆರೋಪಿಗಳ ಬಂಧನ

ತೊಕ್ಕೊಟ್ಟು, ಫೆ.27: ಮಂಗಳೂರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ವಿರೋಧಿಸಿ ತೊಕ್ಕೋಟು ಸಿಪಿಎಂ ಕಚೇರಿಗೆ ಬೆಂಕಿ ಹಚ್ಚಿದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತೊಕ್ಕೊಟು ವಾಸುಕಿನಗರದ ದೀಕ್ಷಿತ್( 28), ಭಟ್ನಗರದ ಡಿ.ಕೆ. ರಕ್ಷಿತ್ (23), ತೊಕ್ಕೊಟ್ಟು ಶಿವಾಜಿ ಕ್ಲಬ್ ಬಳಿಯ ಬೆನ್ನಿ.ಆರ್(22) ಬಂಧಿತ ಆರೋಪಿಗಳು.
ದೀಕ್ಷಿತ್ ಮತ್ತು ರಕ್ಷಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.
Next Story





