ಬೆಂಗ್ರೆಕಸ್ಬಾ: ಜಮಾಅತೆ ಇಸ್ಲಾಮಿ ಹಿಂದ್ ನಿಂದ ಬಡ ಕುಟುಂಬವೊಂದಕ್ಕೆ ಮನೆ ಕೊಡುಗೆ
.jpg)
ಬೆಂಗ್ರೆ ಕಸ್ಬಾ, ಫೆ.27: ಮಂಗಳೂರಿನ ಶ್ರೀಮಂತ ಜನರಿರುವ ಪ್ರದೇಶದ ಮಧ್ಯೆ ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಒಂದೇ ಕೊಠಡಿಯ ಬಾಡಿಗೆ ಮನೆಯಲ್ಲಿ ಮದುವೆ ಪ್ರಾಯ ಮೀರಿರುವ 4 ಹೆಣ್ಣು ಮಕ್ಕಳು ಮತ್ತು ಪತ್ನಿಯೊಂದಿಗೆ ವಾಸವಾಗಿದ್ದ ಬಡ ಕುಟುಂಬವೊಂದಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕವು ಮನೆಯನ್ನು ಕೊಡುಗೆಯಾಗಿ ನೀಡಿದೆ.
ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ದಾನಿಗಳ ಸಹಾಯದಿಂದ ನಿರ್ಮಿಸಲಾದ ಮನೆಯನ್ನು ಪ್ರಮುಖ ಉದ್ಯಮಿ ಹಾಜಿ ಅಸ್ಗರಲಿ ಉದ್ಘಾಟಿಸಿ ಜಮಾಅತೆ ಇಸ್ಲಾಮಿ ಹಿಂದ್ ಬಡ ಮತ್ತು ಅರ್ಹ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಕೊಟ್ಟಿರುವುದು ಶಾಘ್ಲನೀಯ ಎಂದರು.
ಮೌಲಾನಾ ಯಹ್ಯಾ ತಂಙಳ್ ಅವರು ಮಾತನಾಡಿ, ಮನುಷ್ಯರ ಕಷ್ಟಗಳಲ್ಲಿ ನೆರವಾಗುವವನು ದೇವನ ಕೃಪಾಕಟಾಕ್ಷದಲ್ಲಿರುವನು ಮತ್ತು ಸೂರಿಲ್ಲದವರಿಗೆ ಸೂರು ಒದಗಿಸುವುದು ದೇವನು ಇಷ್ಟಪಡುವ ಕೆಲಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಇಸ್ಹಾಕ್ ಫರಂಗಿಪೇಟೆ,ಖತೀಬರಾದ ಸಾಜಿದ್, ಸಿದ್ದೀಕ್ ಜಕ್ರಿಬೆಟ್ಟು, ಅಬ್ದುಲ್ ರಹ್ಮಾನ್ ಜೆಪ್ಪು, ಬಶೀರ್ ಹಾಜಿ, ಅಬ್ದುಲ್ ಕರೀಮ್ ಬೆಂಗ್ರೆ ಮತ್ತಿತರರು ಉಪಸ್ಥಿತರಿದ್ದರು.





