ಸರಕಾರಿ ಕಚೇರಿಗಳಿಂದ ಜಯಾ ಭಾವಚಿತ್ರಗಳ ಎತ್ತಂಗಡಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಚೆನ್ನೈ,ಫೆ.27: ಸರಕಾರಿ ಕಚೇರಿಗಳು ಮತ್ತು ಉಪ್ಪು,ಖನಿಜಯುಕ್ತ ನೀರು ಇತ್ಯಾದಿ ಕಲ್ಯಾಣ ಯೋಜನೆಗಳಿಂದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ,ಜಯಲಲಿತಾ ಅವರ ಭಾವಚಿತ್ರಗಳನ್ನು ತೆಗೆದು ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶ ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳನ್ನು ಸಲ್ಲಿಸಲಾಗಿದೆ.
ಈ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ ನೇತೃತ್ವದ ಪೀಠವು ಮಧ್ಯಾಹ್ನ ಪರಿಶೀಲಿಸಲಿದೆ.
Next Story