ಓಂಪುರಿಗೆ ಆಸ್ಕರ್ ಸಮಾರಂಭದಲ್ಲಿ ಗೌರವ
ಬಾಲಿವುಡ್ ವಿರುದ್ಧ ಹರಿಹಾಯ್ದ ನವಾಝುದ್ದೀನ್

ಮುಂಬೈ, ಫೆ. 27 : ಖ್ಯಾತ ನಟ ದಿವಂಗತ ಓಂಪುರಿ ಅವರಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸಲ್ಲಿಸಿರುವುದನ್ನು ಉಲ್ಲೇಖಿಸಿರುವ ಖ್ಯಾತ ನಟ ನವಾಝುದ್ದೀನ್ ಸಿದ್ದೀಕಿ ಬಾಲಿವುಡ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
ರವಿವಾರ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳೆದ ವರ್ಷ ನಿಧನರಾದ ಕಲಾವಿದರನ್ನು ಸ್ಮರಿಸುವ ಸಂದರ್ಭದಲ್ಲಿ ಓಂಪುರಿಯವರಿಗೆ ಗೌರವ ಸಲ್ಲಿಸಲಾಗಿತ್ತು. ಇದನ್ನು ಉಲ್ಲೇಖಿಸಿರುವ ಖ್ಯಾತ ನಟ ನವಾಝುದ್ದೀನ್ ಸಿದ್ದೀಕಿ " The Academy #Oscars paid homage to late #OmPuri but in #bollywood award functions nobody converse single word for his contribution... SHAME ( ಬಾಲಿವುಡ್ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಯಾರೂ ಓಂಪುರಿಯವರ ಕೊಡುಗೆಗಳ ಬಗ್ಗೆ ಒಂದು ಪದವನ್ನೂ ಹೇಳಲಿಲ್ಲ.. ನಾಚಿಕೆಗೇಡು ) " ಎಂದು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖ್ಯಾತ ನಟ ಓಂಪುರಿ ಹಲವಾರು ಹಾಲಿವುಡ್ ಚಿತ್ರಗಳಲ್ಲೂ ನಟಿಸಿ ಅಂತಾರಾಷ್ಟ್ರೀಯ ಮೆಚ್ಚುಗೆ, ಖ್ಯಾತಿ ಪಡೆದವರು. ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಓಂಪುರಿ ಜನವರಿ ೬ ರಂದು ನಿಗೂಢವಾಗಿ ಮೃತಪಟ್ಟಿದ್ದರು.







