ನಕಲಿ ಸಂಘಟನೆಯ ಹೆಸರಲ್ಲಿ ಹಣ ವಸೂಲಿ, ಓರ್ವನ ಬಂಧನ
ಕಾಸರಗೋಡು, ಫೆ.27: ನಕಲಿ ಸಂಘಟನೆಯ ಹೆಸರಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಹೆಸರು ಬಳಸಿ ಹಣ ವಸೂಲಿ ನಡೆಸಿದ ಓರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೊವ್ವಳ್ ಪಳ್ಳಿಯ ಪ್ರೇಮ್ ಕುಮಾರ್(34) ಎಂದು ಗುರುತಿಸಲಾಗಿದೆ. 'ಮಿತ್ರ 'ಎಂಬ ನಕಲಿ ಸಂಘಟನೆಯ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದು, ಟಿಪ್ಪರ್ ಚಾಲಕ ವಿ.ಕೆ ಸಲೀಂ ರಿಂದ 10 ಸಾವಿರ ರೂ. ವಸೂಲಿ ಮಾಡಿದ್ದನು. ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡಲು ಹಣ ತಂದುದಾಗಿ ಈತ ಸುಳ್ಳು ಹೇಳಿ ಪಡೆದಿದ್ದು ಬಳಿಕ ಸಂಘಟನೆ ಬಗ್ಗೆ ವಿಚಾರಿಸಿದಾಗ ನಕಲಿ ಎಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು . ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ರಾಹುಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
Next Story





