ತೊಕ್ಕೊಟ್ಟು: ಕಿಡಿಗೇಡಿಗಳಿಂದ ಅಂಗಡಿಗಳಿಗೆ ಬೆಂಕಿ
ಉಳ್ಳಾಲ, ಫೆ.27: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆ ಬಳಿಯ ರೈಲ್ವೇ ಕ್ರಾಸಿಂಗ್ ಹತ್ತಿರದ ಮೂರು ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಅಬೂಬಕ್ಕರ್‌ಗೆ ಸೇರಿದ ಹೂವಿನ ಅಂಗಡಿ, ಮನ್ಸೂರ್‌ಗೆ ಸೇರಿದ ಒಣಮೀನಿನ ಅಂಗಡಿ, ಹನೀಫ್‌ಗೆ ಅವರ ಅಗರಬತ್ತಿ ಜೋಪಡಿ ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ಪರಾರಿಯಾಗಿದ್ದಾರೆ.
ಅಂಗಡಿಗಳಿಗೆ ಬೆಂಕಿ ಬಿದ್ದ ಪರಿಣಾಮ ಹಾನಿ ಸಂಭವಿಸಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





.jpg.jpg)

