ಮಂಗಳೂರು: ಮಿನಿ ಟೌನ್‌ಹಾಲ್ ಉದ್ಘಾಟನೆ

ಮಂಗಳೂರು, ಫೆ. 27: ನಗರದ ಪುರಭವನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಬಹುಪಯೋಗಿ ಮಿನಿ ಟೌನ್‌ಹಾಲ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಅವಕಾಶವಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಮೇಯರ್ ಹರಿನಾಥ್ ಅವರು ನೂತನ ಸಭಾಂಗಣ ನಿರ್ಮಿಸುವ ಮೂಲಕ ಕೂಗು ನೀಗಿಸಿದ್ದಾರೆ. ಸಭಾಂಗಣ ಕಾಮಗಾರಿಯು ವೇಗದಲ್ಲಿ ನಡೆದಿದ್ದು, ಹೀಗೆಯೇ ನಗರದ ಅಭಿವೃದ್ದಿ ಕಾರ್ಯಗಳು ವೇಗ ಪಡೆಯಲಿ ಎಂದರು.
ಶಾಸಕ ಜೆ.ಆರ್. ಲೋಬೊ ಮಾತನಾಡಿ, ಟೌನ್‌ಹಾಲ್‌ನ ಬಾಡಿಗೆ ದುಬಾರಿಯಾಗಿ ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂಬ ಕೂಗು ಇತ್ತು. ಮೇಯರ್ ಹರಿನಾಥ್ ನೇತೃತ್ವದಲ್ಲಿ ನೂತನ ಸಭಾಂಗಣ ನಿರ್ಮಿಸುವ ಮೂಲಕ ಜನಸಾಮಾನ್ಯರಿಗೂ ತಲುಪುವಂತಾಗಿದೆ ಎಂದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಿ, ಕವಿತಾ ಸನಿಲ್, ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್ ಕಂದಕ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.
Next Story





