ಆಸ್ಕರ್ ಪ್ರಶಸ್ತಿ: ‘ಮೂನ್‌ಲೈಟ್’ ಶ್ರೇಷ್ಠ ಚಿತ್ರ,‘ಲಾ ಲಾ ಲ್ಯಾಂಡ್’ಗೆ ಶ್ರೇಷ್ಠ ನಿರ್ದೇಶಕ ಸೇರಿ 6 ಪ್ರಶಸ್ತಿ

ಲಾಸ್‌ಏಂಜಲಿಸ್ (ಅಮೆರಿಕ), ಫೆ. 27: 2017ರ ಶ್ರೇಷ್ಠ ಚಿತ್ರಕ್ಕಾಗಿನ ಆಸ್ಕರ್ ಪ್ರಶಸ್ತಿ ಸೇರಿದಂತೆ ಒಟ್ಟು ಮೂರು ಪ್ರಶಸ್ತಿಗಳನ್ನು ‘ಮೂನ್‌ಲೈಟ್’ ಗೆದ್ದುಕೊಂಡಿದೆ. ಈ ಚಿತ್ರ ಗಳಿಸಿದ ಇತರ ಪ್ರಶಸ್ತಿಗಳೆಂದರೆ, ಶ್ರೇಷ್ಠ ಪೋಷಕ ನಟ (ಮಹರ್ಶಲ ಅಲಿ) ಮತ್ತು ಶ್ರೇಷ್ಠ ಮರುಹೊಂದಿಸಿದ ಚಿತ್ರಕತೆ ಪ್ರಶಸ್ತಿಗಳು.
ಅದೇ ವೇಳೆ, ‘ಲಾ ಲಾ ಲ್ಯಾಂಡ್’ ಚಿತ್ರವು ಶ್ರೇಷ್ಠ ನಿರ್ದೇಶಕ (ಡೆಮಿಯನ್ ಶಾಝಲ್) ಮತ್ತು ಶ್ರೇಷ್ಠ ನಟಿ (ಎಮ್ಮಾ ಸ್ಟೋನ್) ಪ್ರಶಸ್ತಿಗಳು ಸೇರಿದಂತೆ ಒಟ್ಟು ಆರು ಆಸ್ಕರ್ ಪ್ರಶಸ್ತಿಗಳನ್ನು ತನ್ನದಾಗಿಸಿದೆ.
ಕ್ಯಾಲಿಫೋರ್ನಿಯದ ಲಾಸ್ ಏಂಜಲಿಸ್‌ನ ಡಾಲ್ಬಿ ತಿಯೇಟರ್‌ನಲ್ಲಿ ರವಿವಾರ ರಾತ್ರಿ ನಡೆದ ರಂಗು ರಂಗಿನ 89ನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೆಚ್ಚೇನೂ ಅಚ್ಚರಿಯ ಫಲಿತಾಂಶಗಳಿರಲಿಲ್ಲ.
‘ಮ್ಯಾಂಚೆಸ್ಟರ್ ಬೈ ದ ಸೀ’ ಚಿತ್ರಕ್ಕಾಗಿ ಕ್ಯಾಸಿ ಆ್ಯಫ್ಲಕ್ ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದರೆ, ‘ಫೆನ್ಸಸ್’ ಚಿತ್ರಕ್ಕಾಗಿ ವಯೋಲಾ ಡೇವಿಸ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಗಳಿಸಿದರು.
ಇರಾನ್ ನಿರ್ದೇಶಕ ಅಸ್ಘರ್ ಫರ್ಹಾದಿ ಅವರ ‘ದ ಸೇಲ್ಸ್‌ಮನ್’ ಚಿತ್ರವು ಶ್ರೇಷ್ಠ ವಿದೇಶಿ ಭಾಷೆ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಆದರೆ, ಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ನಿಷೇಧ ನೀತಿಯಿಂದಾಗಿ ಅವರಿಗೆ ತನ್ನ ಆಸ್ಕರ್ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.
ಆಸ್ಕರ್ ಪ್ರಶಸ್ತಿ 2017ರ ಪಟ್ಟಿ
ಶ್ರೇಷ್ಠ ಚಿತ್ರ: ಮೂನ್‌ಲೈಟ್
ಶ್ರೇಷ್ಠ ನಟಿ: ಎಮ್ಮಾ ಸ್ಟೋನ್ (ಚಿತ್ರ: ಲಾ ಲಾ ಲ್ಯಾಂಡ್)
ಶ್ರೇಷ್ಠ ನಟ: ಕ್ಯಾಸಿ ಆ್ಯಫ್ಲೆಕ್ (ಚಿತ್ರ: ಮ್ಯಾಂಚೆಸ್ಟರ್ ಬೈ ದ ಸೀ)
ಶ್ರೇಷ್ಠ ನಿರ್ದೇಶಕ: ಡೇಮಿಯನ್ ಶಾಝಲ್ (ಚಿತ್ರ: ಲಾ ಲಾ ಲ್ಯಾಂಡ್)
ಶ್ರೇಷ್ಠ ಪೋಷಕ ನಟಿ: ವಯೋಲಾ ಡೇವಿಸ್ (ಚಿತ್ರ: ಫೆನ್ಸಸ್)
ಶ್ರೇಷ್ಠ ಪೋಷಕ ನಟ: ಮಹರ್ಶಲ ಅಲಿ (ಚಿತ್ರ: ಮೂನ್‌ಲೈಟ್)
ಶ್ರೇಷ್ಠ ಮರುಹೊಂದಿಸಿದ ಚಿತ್ರಕತೆ: ಬ್ಯಾರಿ ಜೆಂಕಿನ್ಸ್ ಮತ್ತು ಟ್ಯಾರಲ್ ಆಲ್ವಿನ್ ಮೆಕ್ರೇನಿ (ಚಿತ್ರ: ಮೂನ್‌ಲೈಟ್)
ಶ್ರೇಷ್ಠ ಮೂಲ ಚಿತ್ರಕತೆ: ಕೆನೆತ್ ಲೋನರ್ಗನ್ (ಚಿತ್ರ: ಮ್ಯಾಂಚೆಸ್ಟರ್ ಬೈ ದ ಸೀ)
ಶ್ರೇಷ್ಠ ಮೂಲ ಗೀತೆ: ‘ಸಿಟಿ ಆಫ್ ಸ್ಟಾರ್ಸ್’ (ಚಿತ್ರ: ಲಾ ಲಾ ಲ್ಯಾಂಡ್)- ಜಸ್ಟಿನ್ ಹರ್ವಿಝ್, ಬೆಂಜ್ ಪ್ಯಾಸಕ್ ಮತ್ತು ಜಸ್ಟಿನ್ ಪೌಲ್.
ಶ್ರೇಷ್ಠ ಮೂಲ ಸಂಗಿತ: ಜಸ್ಟಿನ್ ಹರ್ವಿಝ್ (ಚಿತ್ರ: ಲಾ ಲಾ ಲ್ಯಾಂಡ್)
ಶ್ರೇಷ್ಠ ಛಾಯಾಗ್ರಹಣ: ಲಿನಸ್ ಸ್ಯಾಂಡ್‌ಗ್ರನ್ (ಲಾ ಲಾ ಲ್ಯಾಂಡ್)
ಶ್ರೇಷ್ಠ ಲೈವ್ ಆ್ಯಕ್ಷನ್ (ಕಿರುಚಿತ್ರ): ಸಿಂಗ್- ಕ್ರಿಸ್ಟೋಫ್ ಡಿಯಕ್ ಮತ್ತು ಆ್ಯನಾ ಅಡ್ವರ್ಡಿ ಇವರಿಂದ
ಶ್ರೇಷ್ಠ ಸಾಕ್ಷಚಿತ್ರ (ಕಿರುಚಿತ್ರ): ದ ವೈಟ್ ಹೆಲ್ಮೆಟ್ಸ್- ಓರ್ಲಾಂಡೊ ವೊನ್ ಐನ್‌ಸೀಡಲ್ ಮತ್ತು ಜೋನಾ ನ್ಯಾಟಸೆಗರ ಇವರಿಂದ
ಶ್ರೇಷ್ಠ ವಿದೇಶ ಭಾಷೆಯ ಚಿತ್ರ: ದ ಸೇಲ್ಸ್‌ಮನ್- ಅಸ್ಘರ್ ಫರ್ಹಾದಿ







