ಮದ್ಯಕ್ಕಾಗಿ 20 ರೂ. ನೀಡಲಿಲ್ಲವೆಂಬ ಕಾರಣಕ್ಕೆ ಅಣ್ಣನನ್ನೇ ಇರಿದುಕೊಂದ !

ಹೊಸದಿಲ್ಲಿ, ಫೆ.27: ಮದ್ಯ ಖರೀದಿಸಲು 20 ರೂ. ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬ ತನ್ನ ಹಿರಿಯ ಸಹೋದರನನ್ನೇ ಇರಿದುಕೊಂದ ಬರ್ಬರ ಘಟನೆ ಇಲ್ಲಿನ ಸ್ವರೂಪ್ ನಗರ್ ಪ್ರದೇಶದಲ್ಲಿ ರವಿವಾರ ನಡೆದಿದೆ.
ಕೊಲೆಯಾದ ಯುವಕನನ್ನು ಬಂಟಿ ಎಂದು ಗುರುತಿಸಲಾಗಿದೆ. ಆತನನ್ನು ಕಿರಿಯ ಸಹೋದರ ಪಂಕಜ್ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮದ್ಯಪಾನದ ಚಟವಿದ್ದ ಪಂಕಜ್‌ನನ್ನು ಸೋದರ ಬಂಟಿ ಆಗಾಗ್ಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ರವಿವಾರದಂದು ಪಂಕಜ್, 20 ರೂ. ನೀಡುವಂತೆ ಬಂಟಿಯಲ್ಲಿ ಕೇಳಿದ್ದನು. ಆದರೆ ಬಂಟಿ ಹಣ ನೀಡಲು ನಿರಾಕರಿಸಿದಾಗ ಕೆರಳಿದ ಪಂಕಜ್, ಆತನನ್ನು ಅಡುಗೆಮನೆ ಚೂರಿಯಿಂದ ಇರಿದು ಕೊಲೆ ಮಾಡಿದನೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪಂಕಜ್‌ನನ್ನು ಪೊಲೀಸರು ಬಂಧಿಸಿದ್ದು ಆತನ ವಿಚಾರಣೆ ನಡೆಸುತ್ತಿದ್ದಾರೆ.
Next Story