ಮುದ್ರಾಡಿ: ಆರೋಗ್ಯ ತಪಾಸಣಾ ಶಿಬಿರ

ಹೆಬ್ರಿ, ಫೆ.27: ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದ ಪ್ರಯುಕ್ತ ಉಡುಪಿ ಆದರ್ಶ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಶಿಬಿರವನ್ನು ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರ ಶೇಖರ್ ಉದ್ಘಾಟಿಸಿದರು.
ತಜ್ಞ ವೈದ್ಯರಾದ ಪ್ರೊ.ಎ.ರಾಜಾ, ಡಾ. ಉದಯ್ ಪ್ರಭು, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನದ ಧರ್ಮ ದರ್ಶಿ ಮೋಹನ್, ರಂಗ ನಿರ್ದೇಶಕ ಬೆಂಗಳೂರಿನ ಜಗದೀಶ್ ಜಾಲ, ವಾಣಿ ಸುಕುಮಾರ್ ಮೋಹನ್ ಉಪಸ್ಥಿತರಿದ್ದರು.
250 ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
Next Story





