ಅಮೆರಿಕದ ಡ್ರೋನ್ ದಾಳಿಯಲ್ಲಿ ಅಲ್-ಖಾಯಿದ ಉಗ್ರ ಹತ

ಡಮಾಸ್ಕಸ್, ಫೆ. 27: ವಾಯುವ್ಯ ಸಿರಿಯದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಅಲ್-ಖಾಯಿದ ಉಗ್ರ ಸಂಘಟನೆಯ ಉನ್ನತ ನಾಯಕನೊಬ್ಬ ಹತನಾಗಿದ್ದಾನೆ.
ಅಲ್-ಖಾಯಿದ ಸಂಘಟನೆಯ ಜೊತೆಗೆ ಮೂರು ದಶಕಗಳಿಂದ ತೊಡಗಿಸಿಕೊಂಡಿದ್ದ ಅಬು ಅಲ್-ಖಾಯರ್ ಅಲ್-ಮಸ್ರಿ ಹತನಾದ ವ್ಯಕ್ತಿ. ಆತ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಉಸಾಮ ಬಿನ್ ಲಾದನ್‌ನ ಅಳಿಯನೂ ಹೌದು.
ರವಿವಾರ ಆತ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಡ್ರೋನ್‌ನಿಂದ ಸಿಡಿದ ಕ್ಷಿಪಣಿಯೊಂದು ಬಡಿದಾಗ ಆತ ಹತನಾಗಿದ್ದಾನೆ.
ಆತ ಅಲ್-ಖಾಯಿದ ಮುಖ್ಯಸ್ಥ ಅಯ್ಮನ್ ಅಲ್-ಝವಾಹಿರಿಯ ನಿಕಟವರ್ತಿಯಾಗಿದ್ದನು.
Next Story





