ನಾನು ಎರಡು ದ್ವಿಶತಕ ಗಳಿಸಲಿಲ್ಲ ನನ್ನ ಬ್ಯಾಟ್ ದಾಖಲಿಸಿತು: ಸೆಹ್ವಾಗ್

ಹೊಸದಿಲ್ಲಿ, ಫೆ.27: ಭಾರತದ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರೊಬ್ಬರ ಪುತ್ರಿ ದಿಲ್ಲಿಯ ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ‍್ ಹೇಳಿಕೆಗೆ ಪ್ರತಿಯಾಗಿ "ನಾನು ಎರಡು ದ್ವಿಶತಕಗಳನ್ನು ದಾಖಲಿಸಲಿಲ್ಲ. ನನ್ನ ಬ್ಯಾಟ್ ದ್ವಿಶತಕಗಳನ್ನು ದಾಖಲಿಸಿತು ಎಂದು ಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಠಿಸಿದ್ದಾರೆ.
ಗುರ್ಮೆಹರ್ ಕೌರ‍್ ಅವರು " ಪಾಕಿಸ್ತಾನ ನನ್ಮ ತಂದೆಯನ್ನು ಕೊಲ್ಲಲಿಲ್ಲ. ಯುದ್ಧ ಬಲಿ ತೆಗೆದುಕೊಂಡಿತು” ಎಂದು ಸಾಮಾಜಿಕ ಜಾಲಾ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಓದಿರುವ ಸೆಹ್ವಾಗ್ ತೀಕ್ಣವಾಗಿ ಪ್ರಕ್ರಿಯೆ ನೀಡಿದ್ದಾರೆ. ಇದು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.
ಇದಕ್ಕೂ ಮೊದಲು ಗುರ್ಮೆಹರ್ ತಾನು ದಿಲ್ಲಿ ವಿದ್ಯಾರ್ಥಿನಿ. ಬಿಜೆಪಿಗೆ ನಾನು ಹೆದರುವುದಿಲ್ಲ.ನಾನು ಏಕಾಂಗಿಯಲ್ಲ. ದೇಶದ ಎಲ್ಲ ವಿದ್ಯಾರ್ಥಿಗಳು ನನ್ನೊಂದಿಗಿದ್ದಾರೆ ” ಎಂದು ಫೇಸ್‌ಬುಕ್ ನಲ್ಲಿ ಹೇಳಿಕೊಂಡಿದ್ದರು. ಅಮಾಯಕವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಹೇಳಿಕೆ ನೀಡಿದ್ದರು.





