ಊಟ ತರಲು ತಡವಾದ್ದಕ್ಕಾಗಿ ಕ್ಯಾಂಟಿನ್ ಉದ್ಯೋಗಿಗೆ ಥಳಿಸಿದ ಎಂಎಲ್‌ಎ
ಕೇರಳದ ಶಾಸಕ ಪಿ.ಸಿ. ಜಾರ್ಜ್ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ,ಫೆ.27: ಊಟ ತಂದುಕೊಡುವಲ್ಲಿ ತಡಮಾಡಿದನೆಂಬ ಕಾರಣಕ್ಕಾಗಿ ಇಲ್ಲಿನ ಶಾಸಕರ ಹಾಸ್ಟೆಲ್‌ನ ಕ್ಯಾಂಟಿನ್ ಉದ್ಯೋಗಿಗೆ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ಕೇರಳದ ಪಕ್ಷೇತರ ಶಾಸಕ ಪಿ.ಸಿ.ಜಾಜ್ರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಧ್ಯಾಹ್ನ ತಾನು ಊಟವನ್ನು ತಂದುಕೊಟ್ಟ ಸಂದರ್ಭದಲ್ಲಿ ಜಾರ್ಜ್ ಹಾಗೂ ಅವರ ಖಾಸಗಿ ಸಹಾಯಕ ತನ್ನನ್ನು ಥಳಿಸಿದ್ದಾರೆಂದು ತಿರುವನಂಪುರದ ವಿಧಾನಸಭಾ ಸಂಕೀರ್ಣದಲ್ಲಿರುವ ಶಾಸಕರ ಹಾಸ್ಟೆಲ್‌ನ ಉದ್ಯೋಗಿ, 22 ವರ್ಷದ ಮನು ಆಪಾದಿಸಿದ್ದಾರೆ.
ಪಿ.ಸಿ.ಜಾರ್ಜ್ ಹಾಗೂ ಅವರ ಸಹಾಯಕ ಸನ್ನಿ ವಿರುದ್ಧ ಮ್ಯೂಸಿಯಂ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಶಾಸಕರು ತನ್ನ ಮುಖಕ್ಕೆ ಹೊಡೆದಿದ್ದು, ಕಣ್ಣು ಹಾಗೂ ತುಟಿಗಳಿಗೆ ಗಾಯಳಾಗಿರುವುದಾಗಿ ಮನು ಹೇಳಿದ್ದಾರೆ.
ಆದರೆ ಶಾಸಕ ಪಿ.ಸಿ.ಜಾರ್ಜ್, ಈ ಆರೋಪವನ್ನು ನಿರಾಕರಿಸಿದ್ದು, ಊಟವನ್ನು ತಡವಾಗಿ ತಂದುದಕ್ಕಾಗಿ ಕ್ಯಾಂಟಿನ್ ಉದ್ಯೋಗಿಯನ್ನು ಬೈದಿದ್ದೆನಷ್ಟೇ ಎಂದು ಹೇಳಿದ್ದಾರೆ.
Next Story





