ಮಕ್ಕಳ ಭವಿಷ್ಯಕ್ಕೆ ಪೋಷಕರು, ಸಮಾಜ ಸೂಕ್ತ ವಾತಾವರಣ ನಿರ್ಮಿಸಲಿ; ಶಂಕರ ಹಲಗತ್ತಿ
ಚಿಕ್ಕಮಗಳೂರು: ಜಿಲ್ಲಾ 13ನೆ ಕನ್ನಡ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು ಫೆ.27: ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಕನಸು ಕಟ್ಟಿಕೊಳ್ಳಲು ಪೋಷಕರು ಹಾಗೂ ಈ ಸಮಾಜ ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದು ಧಾರವಾಡದ ಗುಬ್ಬಚ್ಚಿಗೂಡು ಪತ್ರಿಕೆ ಸಂಪಾದಕ ಹಾಗೂ ರಾಜ್ಯ ಬಾಲವಿಕಾಸ ಮಂಡಳಿಯ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯದ ಭವನದಲ್ಲಿ ಜಿಲ್ಲಾ 13ನೆ ಕನ್ನಡ ಸಾಹಿತ್ಯ ಸಮ್ಮೇಳನದ ಚಂದ್ರಯ್ಯನಾಯ್ಡು ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಸಾಹಿತ್ಯ ಮತ್ತು ಮಕ್ಕಳ ಭಾವನಾತ್ಮಕ ವಿಕಾಸ ವಿಷಯದ ಕುರಿತು ಮಾತನಾಡಿದ ಅವರು, ಹಿಂದಿನ ಕಾಲದ ಮಕ್ಕಳಿಗೆ ಬಾಲ್ಯ ಸುಮಧುರವಾಗಿ ಕಂಡರೆ, ಇಂದಿನ ಮಕ್ಕಳಿಗೆ ಬಾಲ್ಯ ಏನು ಎಂದರೇನೇ ಗೊತ್ತಿಲ್ಲ ಎಂದು ವಿಷಾದಿಸಿದರು.
ಇಂದು ನಾವು ನಮ್ಮ ಮಕ್ಕಳಿಗೆ ವ್ಯಾಮೋಹ ಹತ್ತಿಸಿದ್ದೇವೆ. ಹಾಗಾಗಿ ಕಾನ್ವೆಂಟ್ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಅಂತಹ ಶಾಲೆಗಳಲ್ಲಿ ಆಟವಾಡಲು ಮೈದಾನಗಳೇ ಇಲ್ಲ,ಮನೆಯಲ್ಲೂ ದೈಹಿಕ ಚಟುವಟಿಕೆಗಳಿಗೆ ಸೂಕ್ತವಾದ ವಾತಾವರಣವಿಲ್ಲ.ಈ ಸ್ಥಿತಿಯಲ್ಲಿ ಮಕ್ಕಳು ಪಠ್ಯಪುಸ್ತಕ ಬಿಟ್ಟರೆ ಮತ್ತೇನೂಯಲು ಸಾಧ್ಯವಿಲ್ಲದಂತಾಗಿದೆ. ಹಿಂದಿನ ಕಾಲದಲ್ಲಿ ತಾಯಿ ಮಣ್ಣಿನೊಂದಿಗೆ ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನು ಎಂದರೆ ಈಗಿನ ತಾಯಿ ಮಣ್ಣಿನಿಂದ ದೂರ ಇರು ಎಂದು ಹೇಳುತ್ತಾಳೆ. ಮಕ್ಕಳಿಗೆ ಮಣ್ಣಿನ ಸ್ಪರ್ಶವೇ ಗೊತ್ತಿಲ್ಲ.
ಜಾಹೀರಾತುಗಳ ಮೂಲಕ ಭಾವನೆಗಳು ಅರಳುವಂತಾಗಿವೆ ಎಂದರು. ಆಧುನಿಕ ಜಗತ್ತಿಗೆ ಯಾವ ರೀತಿ ಮಕ್ಕಳ ಸಾಹಿತ್ಯ ಬೇಕು? ಎಂಬ ಪ್ರಶ್ನೆಗೆ ಹಲಗತ್ತಿ ಉತ್ತರಿಸಿ, ಇಲ್ಲಿಯ ತನಕ ಪುರಾಣ ಕತೆಗಳನ್ನು ಕೇಳಿದ್ದೇವೆ ಈಗ ವೈಜ್ಞಾನಿಕ ಕತೆಗಳಿವೆ, ಪೂರ್ಣ ಚಂದ್ರ ತೇಜಸ್ವಿ ಅವರ ಮಿಲೇನಿಯಂ, ಅನುಪಮಾ ನಿರಂಜನ್ ಅವರ ದಿನಕ್ಕೊಂದು ಕಥೆ ಪುಸ್ತಕಗಳು ಲಭ್ಯವಿದೆ ಎಂದರು. ಈ ದೇಶದಲ್ಲಿ ಅಧಿಕಾರಿಯಾಗಬೇಕೆಂಬ ಬಯಕೆ ಎಲ್ಲರ ಲ್ಲೂ ಇದೆ ರೈತನಾಗುವ ಹಂಬಲ ಏಕಿಲ್ಲ ? ಎಂಬ ಅರುಣ್ ಪ್ರಶ್ನೆಗೆ ಬಿಎಸ್ಸಿ, ಎಂಎಸ್ಸಿ ಎಜಿ ಮಾಡಿಕೊಂಡರೆ ಉತ್ತಮ ರೈತನಾಗಬಹುದು ಎಂದು ಹಿರೇಮಗಳೂರು ಕಣ್ಣನ್ ಉತ್ತರಿಸಿದರು. ಸೆಲೆಬ್ರಿಟಿಗಳು ಬಂದರೆ ನೂಕುನುಗ್ಗಲು ಜನ ಸೇರುತ್ತಾರೆ.
ಇಂತಹ ಸಾಹಿತ್ಯ ಸಮ್ಮೇಳನಕ್ಕೆ ಜನ ಏಕೆ ಬರುವುದಿಲ್ಲ ಎಂಬ ಪ್ರಶ್ನೆಗೆ, ಹಿರೇಮಗಳೂರು ಕಣ್ಣನ್ ಉತ್ತರಿಸಿ, ಗಂಧ ತೇಯುವ ಕಡೆ ಒಂದೂ ನೊಣವು ಕಾಣೆ, ಸಂದಿಗೊಂದಿಯಲ್ಲಿ ಮಲಬಿಡುವ ಕಡೆ ನೂರು ನೊಣ ಮುತ್ತುವುದು ಎಂದು ಸರ್ವಜ್ಞನ ವಚನವನ್ನು ಉದಾಹರಿಸಿದರು.ಸಮ್ಮೇಳನಾಧ್ಯಕ್ಷ ಡಾ. ಮರುಳಸಿದ್ದಪ್ಪ, ಸುಮಂತ್, ಚಂದನ್, ಅನು ಸಂವಾದಲ್ಲಿದ್ದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಆರ್.ಡಿ.ರವೀಂದ್ರ.ರೇಖಾ ಹುಲಿಯಪ್ಪಗೌಡ, ಡಾ.ಸಿ.ಕೆ.ಸುಬ್ಬರಾಯ, ನಿಂಗೇಗೌಡ, ಪರಮೇಶ್ವರಪ್ಪ, ಕೆ.ಆರ್.ಪ್ರಭಾಕರ್, ಪುಟ್ಟಪ್ಪ, ಪೂರ್ಣಿಮಾ ಸಿದ್ದಪ್ಪ, ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು. ದೇವನೂರು ಅಚ್ಯುತ್ ಸ್ವಾಗತಿಸಿ ಪ್ರಕಾಶ್ ನಿರೂಪಿಸಿ ದರು.ಮುಗುಳಿಕಟ್ಟೆ ಲೋಕೇಶ್ ವಂದಿಸಿದರು.ಮುಸೂದನ್ ಕಾರ್ಯಕ್ರಮ ನಿರ್ವಹಿಸಿದರು.
ವಿಜ್ಞಾನವು ಮನುಷ್ಯನಿಗೆ ಚಿರಂಜೀವಿಯಾಗಿಸಲು ಹೊರಟಿದೆ
ವಿ್ಞಾನ ಮನುಷ್ಯನನ್ನು ಚಿರಂಜೀವಿಯಾಗಿಸಲು ಹೊರಟಿದೆ. ಆದರೆ ಈ ಕಾಲದ ದುರಂತವೆಂದರೆ ಮನುಷ್ಯನ ಮನಸ್ಸನ್ನು ಪ್ರಸನ್ನಗೊಳಿಸುವ ವಾತಾವ ರಣವನ್ನು ಸೃಷ್ಟಿಸದಿುವುದೇ ವಿಜ್ಞಾನದ ಅರ್ಥಕ್ಕೆ ಅಪವೌಲ್ಯೀಕರಣವಾಗುತ್ತಿದೆ.
ಬದುಕಿನ ಸ್ಮಿತೆಯನ್ನು ಮನುಷ್ಯ ಕಳೆದುಕೊಳ್ಳಬಾರದು ಎಂದು ನಾಡಿನ ಖ್ಯಾತ ರಂಗಕರ್ಮಿ ಹಾಗೂ ಜಿಲ್ಲಾ 13ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಾ. ಕೆ.ಮರುಳಸಿದ್ದಪ್ಪ ನುಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ, ಕ್ಯಾತನಬೀಡು ಪ್ರತಿಷ್ಠಾನ, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಉದ್ಭವ ಪ್ರಕಾಶನದ ಆಶ್ರಯದಲ್ಲಿ ನಡೆದ ಗೌರವ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಟ್ಟುಪಾಡುಗಳಾಚೆ ಪ್ರೀತಿಯನ್ನು ಸೃಷ್ಟಿಸುವ ಸಾಹಿತ್ಯ ಬರಬೇಕಿದೆ.ನಾಡಿನಲ್ಲಿ ವರ್ಗ ಪ್ರಬೇಧಗಳ ಸಾಹಿತ್ಯಗಳ ಆರ್ಭಟದ ನಡುವೆ ಸೃಜನಾತ್ಮಕ ಸಾಹಿತ್ಯ ಕಟ್ಟಬೇಕಿದೆ ಎಂದು ಅಭಿಪ್ರಾಯಿಸಿದರು. ದ್ಧೀಕರಣವೆನ್ನುವುದು ಒಂದು ತಪ್ಪಸ್ಸಿದ್ದ ಹಾಗೆ, ಮನುಷ್ಯ ನಂಬಿಕೆಗಳನ್ನು ಕಳೆದುಕೊಳ್ಳುತ್ತಿದ್ದಾನೆ. ನಮ್ಮನ್ನಾಳುವ ಪ್ರಭುತ್ವಗಳು ಅಪನಂಬಿಕೆಗಳ,ಅಸತ್ಯದ ಕೇಂದ್ರಗಳಾಗುತಿ್ತವೆ.
ಮೊದಲು ಇವುಗಳ ಶುದ್ಧೀಕರಣ ಅಗತ್ಯವಿದೆ. ಧರ್ಮ ಮತ್ತು ನಮ್ಮ ಬದುಕಿನ ಆಚರಣೆಯಲ್ಲಿ ಅಪನಂಬಿಕೆಗಳನ್ನು ದಾಟಿ ನಂಬಿಕೆಗಳನ್ನು ಸೃಷ್ಟಿಸುವ ಸಮಾಜ ಕಟ್ಟಬೇಕಿದೆ.ಬರವಣಿಗೆಗಳಲ್ಲಿ ಎಲ್ಲಾ ವರ್ಗದ ಜನಸಮು ದಾಯದ ಓದುವ ಸಂಸ್ಕೃತಿ ಕಟ್ಟೇು ದುರದೃಷ್ಟವಶಾತ್ ಬರಹಗಾರರಲ್ಲಿಯೂ ಕೂಡ ವರ್ಗದ ವರ್ಗೀಕರ ಣವಿರುವುದು ವಿಷಾದನೀಯ.
ನಾಡಿನ ಖ್ಯಾತ ಕಥೆಗಾರ ಕುಂ. ವೀರಭದ್ರಪ್ಪ
ಪರಸ್ಪರ ಗೌರವಿಸುವುದು ಸಮಾನತೆ: ಲೇಖಕಿ ಶುಭಾ
ಚಿಕ್ಕಮಗಳೂರು, ಭಾರತೀಯ ಪರಂಪರೆ ಸೃಷ್ಟಿಸಿರುವ ಚೌಕಟ್ಟುಗಳಿಂದಾಗಿ ನಿರ್ಮಾಣವಾಗಿರುವ ಬಂಧನದಿಂದ ಮಹಿಳೆಯನ್ನು ಮುಕ್ತವಾಗಿ ಬಿಡುಗಡೆಗೊಳಿಸಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಲೇಖಕಿ ಡಾ. ಶುಭಾ ಮರವಂತೆ ಹೇಳಿದರು. ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದ ಚಂದ್ರಯ್ಯನಾಯ್ಡು ವೇದಿಕೆಯಲ್ಲಿ ನಡೆದ ಗೋಷ್ಠಿಯಲ್ಲಿ ಸ್ತ್ರೀ ಸಮಾನತೆಗಿರುವ ಆತಂಕ ಮತ್ತು ಸವಾಲುಗಳು ವಿಷಯದ ಕುರಿತು ಅವರು ಮಾತನಾಡಿದರು. ಹೆಣ್ಣಿನ ಸಮಾನತೆ ಬಗ್ಗೆ ಮಾತನಾಡುವುದೆಂದರೆ ಗಂಡನ್ನು ದೂರುವುದಲ್ಲ.
ಗಂಡು ಮತ್ತು ಹೆಣ್ಣಿಗೆ ಎದುರುಗೊಳ್ಳುವ ಸಮಸ್ಯೆಗಳೇ ಬೇರೆ ಬೇರೆ. ಆದರೆ ಪರಸ್ಪರವಾಗಿ ಗೌರವಿಸುವುದು ಸಮಾನತೆ. ಪ್ರತಿ ಗಂಡಿನೊಳಗೆ ಓರ್ವ ಹೆಣ್ಣಿದ್ದಾಳೆ. ಈ ಸಂದರ್ಭದಲ್ಲಿ ನಮ್ಮ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳಬೇಕಾದ ಸವಾಲುಗಳು ನಮ್ಮ ಮುಂದಿವೆ ಎಂದು ಹೇಳಿದರು.
ದೇಶದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳು ನಮ್ಮ ಮುಂದಿರುವ ಆತಂಕಗಳೇ. ಆದರೆ,ಇಂದು ಮಹಿಳೆ ದೌರ್ಜನ್ಯ ಸಹಿಸಿಕೊಳ್ಳುವ ಕಾಲಘಟ್ಟದಲ್ಲಿಲ್ಲ.ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಂಡಿದ್ದಾಳೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಮರುಳುಸಿದ್ದಪ್ಪ,ಎಮ್ಮೆಲ್ಸಿ ಡಾ.ಮೋಟಮ್ಮ, ಸಿಪಿಐನ ರಾಧಾಸುಂದರೇಶ್, ಮೋಹಿನಿ ಸಿದ್ದೇ ಗೌಡ, ಎಸ್.ಎಸ್.ವೆಂಕಟೇಶ್, ಶಾರದಮ್ಮ, ಕೆ.ಎಸ್.ಸಂತೋಷ್ಕುಮಾರ್, ಡಿ.ಎಚ್.ಮೋಹನ್ಕುಮಾರ್ ಉಪಸ್ಥಿತರಿದ್ದರು.
ನೋಟು ಅಮಾನ್ಯೀಕರಣದ ಕ್ರಮ ಅಗತ್ಯವಿರಲಿಲ್ಲ:
ಅರ್ಥಶಾಸ್ತ್ರಜ್ಞ ಪೂರ್ಣೇಶ್ ಚಿಕ್ಕಮಗಳೂರು, ಫೆ.27: ಅಸಂಘಟಿತ ವಲಯ ಹೆಚ್ಚಾಗಿರುವ ದೇಶದಲ್ಲಿ ನೋಟುಗಳ ಅಮಾನ್ಯೀಕರಣದ ಕ್ರಮ ಅಗತ್ಯವಿರಲಿಲ್ಲ ಎಂದು ಲೇಖಕ, ಅರ್ಥಶಾಸ್ತ್ರಜ್ಞ ಕೆ.ಕೆ.ಪೂರ್ಣೇಶ್ ಹೇಳಿದ್ದಾರೆ.
ರಾಷ್ಟ್ರಕವಿ ಕುವೆಂಪು ಮಹಾಮಂಟಪದ ಚಂದ್ರಯ್ಯನಾಯ್ಡು ವೇದಿಕೆಯಲ್ಲಿ ನಡೆದ ಜಿಲ್ಲಾ 13 ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೋಟು ರದ್ದತಿ ಮತ್ತು ಆರ್ಥಿಕ ಪರಿಣಾಮಗಳು ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಇತ್ತೀಚೆಗೆ ದೇಶದಲ್ಲಿ ನಡೆದಿದ್ದು ನೋಟು ಸ್ಥಳಾಂತರೀಕರಣವೇ ಹೊರತು ನೋಟುಗಳ ಅಮಾನ್ಯೀಕರಣವಲ್ಲ ಎಂದ ಅವರು, ಹೈ ಡಿನಾಮಿನೇಷನ್ ನೋಟುಗಳಿದ್ದಾಗ ನೋಟು ಅಮಾನ್ಯೀಕರಣ ಮಾಡಬಹುದಿತ್ತು ಎಂದರು.
ನೋಟು ಅಮಾನ್ಯೀಕರಣದಿಂದ ಸಾಕಷ್ಟು ದುಷ್ಪರಿಣಾಮಗಳಾದವು,ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ದೇಶದ ಜಿಡಿಪಿ ದರವೇ ಶೇ.2ರಷ್ಟು ಕುಸಿಯಿತು. ಶ್ರೀಮಂತರಿಗೆ ಏಟು ಕೊಟ್ಟು ಬಡವರಿಗೆ ಒಳ್ಳೆಯದು ಮಾಡಬೇಕೆಂಬ ಉದ್ದೇಶ ತಲೆಕೆಳಗಾಗಿ ಶ್ರೀಮಂತರಿಗೆ ಹೆಚ್ಚು ಅನುಕೂಲವಾಯಿತೇ ವಿನಹ ಬಡವರು ಸಂಕಷ್ಟ ಅನುಭವಿಸುವಂತಾಯಿತು.ವೇಗವಾಗಿ ಹೋಗುತ್ತಿದ್ದ ದೇಶದ ಆರ್ಥಿಕ ವ್ಯವಸ್ಥೆಗೆ ಬ್ರೇಕ್ ಹಾಕಿದಂತಾಯಿತು ಎಂದು ಹೇಳಿದರು.
ನೋಟು ಅಮಾನ್ಯೀಕರಣದ ಉದ್ದೇಶ ಒಳ್ಳೆಯದಿದ್ದರೂ ಅದು ಸರಿಯಾಗಿ ಅನುಷ್ಠಾನವಾಗದ ಕಾರಣ ವಿಫಲತೆ ಕಾಣಬೇಕಾಯಿತು. ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ಕ್ರಮ ಸಮರ್ಥಿಸಿಕೊಳ್ಳಲು ಹಾಗೂ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಕ್ಯಾಶ್ಲೆಸ್, ಡಿಜಿಟಲೇಶನ್ ಎಂಬ ಬಾಣ ಬಿಟ್ಟಿದ್ದಾರೆ, ಎಂದು ಟೀಕಿಸಿದರು.







