ಸಂಘಪರಿವಾರದಿಂದ ಮನು ಸಂವಿಧಾನ ಹೇರುವ ಹುನ್ನಾರ
ಭಟ್ಕಳ, ಫೆ.27: 2019ರ ವಿಧಾನಸಭಾ ಚುನಾವಣೆ ಸಂವಿಧಾನದ ಅಳಿವು ಉಳಿವಿನ ಹೋರಾಟವಾಗಿದ್ದು, ಸಂಘಪರಿವಾರ ಇದನ್ನು ಗೆದ್ದು ಬಾಬಾ ಸಾಹೇಬರ ಸಂವಿಧಾನ ನಾಶ ಮಾಡಿ ಮನುವಿನ ಸಂವಿಧಾನವನ್ನು ದೇಶದ ಮೇಲೆ ಹೇರುವ ಹುನ್ನಾರ ನಡೆಸುತ್ತಿದೆ ಎಂದು ಸಂವಿಧಾನ ಶಿಲ್ಪಿಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಾಶ ಯಶವಂತ್‌ಅಂಬೇಡ್ಕರ್ ಹೇಳಿದರು.
ಅವರು ರವಿವಾರ ನಗರದ ಸಾರ್ವಜನಿಕ ಮೈದಾನದಲ್ಲಿ ವೆಲ್ಫೇರ್ ಪಾರ್ಟಿ ಆಫ್‌ಇಂಡಿಯಾದ ಯುವ ಘಟಕ ಆಯೋಜಿಸಿದ್ದ ‘ಯುವ ಜಾಗೃತಿ ದೇಶದ ಸಮೃದ್ಧಿ’ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಬಹುಸಂಖ್ಯಾತರಾದ ಇಲ್ಲಿನ ಹಿಂದುಳಿದ ವರ್ಗ ಹಾಗೂ ಅವರ ಸಂತರ ಧರ್ಮವನ್ನು ಆಕ್ರಮಿಸಿಕೊಂಡು ಬಲವಂತವಾಗಿ ಆರೆಸ್ಸೆಸ್‌ನ ವೈದಿಕ ಧರ್ಮ ವನ್ನು ದೇಶದ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿ ರಾಜಕೀಯರಂಗವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ನಾವಿಂದು ಸಾಂಸ್ಕೃತಿಕ ಹಾಗೂ ಸೈದ್ಧಾಂತಿಕ ಯುದ್ದವನ್ನು ಎದುರಿಸು ತ್ತಿದ್ದೇವೆ. ಸಂತರ ವಿಚಾರಧಾರೆ ವೈದಿಕರ ಹಿಂದೂ ಧರ್ಮಕ್ಕಿಂತಲೂ ಭಿನ್ನವಾಗಿದ್ದು, ಅದನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ ಎಂದರು. ಸಮಾರಂಭದಲ್ಲಿ ಆಶಯ ನುಡಿಯನ್ನಾಡಿದ ಬಿ.ಟಿ. ಲಲಿತಾ ನಾಯಕ್, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ದನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದ್ದು, ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ಕಪ್ಪಕಾಣಿಕೆಯಡೈರಿಯನ್ನು ಬಿಡುಗಡೆಗೊಳಿಸುವ ನಾಟಕವನ್ನಾಡುವ ಎರಡೂ ಪಕ್ಷದವರು ಕಳ್ಳರೇ ಆಗಿದ್ದಾರೆ. ಬಡಜನರ ಪಾಪದ ಹಣದಿಂದ ಗದ್ದುಗೆ ಅಲಂಕರಿಸಿದ್ದಾರೆ. ನೋಟ್ ಬ್ಯಾನ್ ಮಾಡುವುದರ ಮೂಲಕ ಬಡವರ ಶಾಪಕ್ಕೆ ುರಿಯಾಗಿರುವ ಮೋದಿ ಕ್ಷಮಿಸಲು ಅನರ್ಹವ್ಯಕ್ತಿ. ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಜನರು ತಕ್ಕ ಪಾಠಕಲಿಸಲಿದ್ದಾರೆ ಎಂದರು.
ಪಕ್ಷದ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಮುಜ್ತಬಾ ಫಾರೂಖ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅಕ್ಬರ್ ಅಲಿ ಉಡುಪಿ, ಪ್ರಗತಿ ಪರ ಚಿಂತಕ ಕೆ.ಎಂ.ಕುನ್ನಿ ಅಬ್ದುಲ್ಲಾ ಮಡಿಕೇರಿ, ತಾಹೀರ್ ಹುಸೈನ್, ಯುವ ಘಟಕದ ರಾಜ್ಯಾಧ್ಯಕ್ಷ ತಾಜುದ್ದೀನ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.







