ಮಂಗಳೂರು ಹರತಾಳ: ಬಸ್‌ಗೆ ಕಲ್ಲೆಸೆದ ಐವರ ಬಂಧನ

ಮಂಗಳೂರು: ಫೆ.25 ರಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನ ವಿರೋಧಿಸಿ ನಡೆದ ಬಂದ್ ಸಂದರ್ಭದಲ್ಲಿ ಕೆಸ್ಸಾರ್ಟಿಸಿ ಬಸ್ ಗೆ ಕಲ್ಲು ಎಸೆದ ಐದು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಬಂಟ್ವಾಳ ಮಾರಿಪಳ್ಳದ ಪ್ರವೀಣ್ (28), ಕಿಶೋರ್ ( 28), ಕುಮ್ಡೇಲ್ ನ ಮುಕೇಶ್, ಕಲ್ಲಿಗೆಯ ಆತೀಶ್ , ಬಂಟ್ವಾಳದ ಅಚ್ಯುತ ಎಂದು ಗುರುತಿಸಲಾಗಿದೆ.
ಬಂಟ್ವಾಳ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಗುರುತಿಸಿದ್ದಾರೆ.
Next Story





