ಧರ್ಮಸ್ಥಳ: ಮಧ್ಯವರ್ತಿಗಳಿಗೆ ಖಾಕಿ ಖದರ್ ತೋರಿಸಿದ ಪೊಲೀಸರು
_0.jpg)
ಮಂಗಳೂರು, ಫೆ.27: ಕಾರಣವಿಲ್ಲದೆ ಠಾಣೆ ಪ್ರವೇಶಿಸಿದ ವ್ಯಕ್ತಿಗಳ ಮೇಲೆ ಕೇಸ್ ದಾಖಲಿಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಧ್ಯವರ್ತಿಗಳಾಗಿ ಬಂದಿದ್ದ 5 ಯುವಕರಿಗೆ ನೋಟೀಸ್ ಜಾರಿ ಮಾಡಿ ಪೊಲೀಸರ್ ಖಾಕಿ ಖದರ್ ತೋರಿಸಿದ್ದಾರೆ.
ನಾರಯಣ, ಶಶಿಧರ, ಸತೀಶ್, ಚರಣ್, ರಮೇಶ ಎಂಬವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಾ.1 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ನೋಟೀಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 94ರಡಿ ಕೇಸು ದಾಖಲು ಮಾಡಲಾಗಿದೆ.
Next Story





