ದೈಹಿಕ ಮತ್ತು ಮಾನಸಿಕತೆಯನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ: ಶಿವರಾಮ ಏನೆಕಲ್

ಸುಳ್ಯ, ಫೆ.27: ನಮ್ಮ ಶರೀರವನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ಕ್ರೀಢೆ ತುಂಬಾ ಸಹಕಾರಿಯಾಗುತ್ತದೆ. ಜೀವನದಲ್ಲಿ ಕ್ರೀಡೆಗೆ ಪ್ರಾಮುಖ್ಯತೆ ನೀಡುವುದು ಈ ಕಾಲಘಟ್ಟದಲ್ಲಿ ಅಗತ್ಯ, ದೇಶ ಕಾಯುವ ಯೋಧರು ದಿನ ನಿತ್ಯ ದೇಹ ದಂಡಿಸಿ ಕೆಲಸ ಮಾಡುತ್ತಾರೆ. ಈ ತರಹದ ಮಾನಸಿಕತೆ ಬರುವುದು ಕ್ರೀಡಾ ಚಟುವಟಿಕೆಯಿಂದ ಮಾತ್ರ ಎಂದು ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಶಿವರಾಮ ಏನೆಕಲ್ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ಕೆ ವಹಿಸಿದ್ದರು. ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ನಟರಾಜ್ ಭಾಗವಹಿಸಿದ್ದರು.
ಕ್ರೀಡಾ ಕಾರ್ಯದರ್ಶಿ ಕಿಶನ್ ರಾಜ್ ಕ್ರೀಡಾ ಪ್ರಮಾಣ ವಚನ ಭೋದಿಸಿದರು.
ಕುಮಾರಿ ಪ್ರಶಾಂತಿ ಹಾಗೂ ರಮ್ಯ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಭೊಧಕರಾದ ಸತೀಶ್ ಕುಮಾರ್ ಕೆ ಆರ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ವೆಂಕಟೇಶ ಪ್ರಸನ್ನ ವಂದಿಸಿದರು. ಹಿಂದಿ ಉಪನ್ಯಾಸಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.







