ಏಕದಿನ ಕ್ರಿಕೆಟ್ ಚರಿತ್ರೆಯಲ್ಲಿ ಏಳನೆ ಕನಿಷ್ಠ ಮೊತ್ತಕ್ಕೆ ಝಿಂಬಾಬ್ವೆ ಆಲೌಟ್
ಬೌಲರ್‌ಗಳ ಸಂಘಟಿತ ದಾಳಿ, ಸರಣಿ ಜಯಿಸಿದ ಅಫ್ಘಾನಿಸ್ತಾನ

ಹರಾರೆ, ಫೆ.26: ಸಂಘಟಿತ ದಾಳಿ ನಡೆಸಿದ ಅಫ್ಘಾನಿಸ್ತಾನದ ಬೌಲರ್‌ಗಳು ಇಲ್ಲಿ ರವಿವಾರ ನಡೆದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಝಿಂಬಾಬ್ವೆಯನ್ನು ಕೇವಲ 54 ರನ್‌ಗಳಿಗೆ ಆಲೌಟ್ ಮಾಡಿದೆ. ಈ ಮೂಲಕ ಡಿ/ಎಲ್ ನಿಯಮದ ಪ್ರಕಾರ ಪಂದ್ಯವನ್ನು 106 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ.
ಝಿಂಬಾಬ್ವೆ ತಂಡ ಏಕದಿನ ಇತಿಹಾಸದಲ್ಲಿ ಏಳನೆ ಕನಿಷ್ಠ ಮೊತ್ತಕ್ಕೆ ಆಲೌಟಾಗಿದೆ. ಏಕದಿನದಲ್ಲಿ ಕನಿಷ್ಠ ಸ್ಕೋರ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಭಾರತ(54) ಹಾಗೂ ವೆಸ್ಟ್‌ಇಂಡೀಸ್(54)ತಂಡದೊಂದಿಗೆ 7ನೆ ಸ್ಥಾನ ಹಂಚಿಕೊಂಡಿದೆ. ಸರಣಿಯ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಝಿಂಬಾಬ್ವೆ 2-2 ರಿಂದ ಸಮಬಲ ಸಾಧಿಸಿ ಸರಣಿ ಗೆಲ್ಲುವ ಫೇವರಿಟ್ ತಂಡವಾಗಿತ್ತು.
ಎರಡೂ ತಂಡಗಳಿಗೆ ರವಿವಾರದ ಪಂದ್ಯ ನಿರ್ಣಾಯಕವಾಗಿತ್ತು. ಆದರೆ, ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿರುವ ಝಿಂಬಾಬ್ವೆ ಏಕದಿನದಲ್ಲಿ ನಾಲ್ಕನೆ ಬಾರಿ ಕನಿಷ್ಠ ಮೊತ್ತವನ್ನು ಗಳಿಸಿತು. 2004ರಲ್ಲಿ ಹರಾರೆಯಲ್ಲಿ ಶ್ರೀಲಂಕಾದ ವಿರುದ್ಧ ಕೇವಲ 35 ರನ್‌ಗೆ ಆಲೌಟಾಗಿತ್ತು. ಇದು ತಂಡವೊಂದು ಏಕದಿನದಲ್ಲಿ ಗಳಿಸಿರುವ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಝಿಂಬಾಬ್ವೆಯ ಅತ್ಯಂತ ಕಳಪೆ ಪ್ರದರ್ಶನವೂ ಇದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 253 ರನ್ ಗಳಿಸಿತ್ತು. ಆರಂಭಿಕ ಆಟಗಾರ ನೂರ್ ಅಲಿ ಝದ್ರಾನ್(46 ರನ್, 49 ಎಸೆತ, 7 ಬೌಂಡರಿ,1 ಸಿಕ್ಸರ್),ರಹಮತ್ ಶಾ(50) ಹಾಗೂ ಮುಹಮ್ಮದ್ ನಬಿ(48 ರನ್, 40 ಎಸೆತ, 4 ಬೌಂಡರಿ, 1 ಸಿಕ್ಸರ್) ಅಫ್ಘಾನಿಸ್ತಾನ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
ಪಂದ್ಯದ ದ್ವಿತೀಯಾರ್ಧದಲ್ಲಿ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು 22 ಓವರ್‌ಗೆ ಕಡಿತಗೊಳಿಸಲಾಯಿತು. ಡಿಎಲ್ ನಿಯಮದ ಪ್ರಕಾರ ಝಿಂಬಾಬ್ವೆ ಗೆಲುವಿಗೆ 161 ರನ್ ಪರಿಷ್ಕೃತ ಗುರಿ ನೀಡಲಾಯಿತು.
ಆಮಿರ್ ಹಂಝಾ(3-20), ಆಲ್‌ರೌಂಡರ್ ಮುಹಮ್ಮದ್ ನಬಿ(3-14) ಹಾಗೂ ರಶೀದ್ ಖಾನ್(2-8) ಸಂಘಟಿತ ದಾಳಿಗೆ ತತ್ತರಿಸಿದ ಝಿಂಬಾಬ್ವೆ 13.5 ಓವರ್‌ಗಳಲ್ಲಿ 54 ರನ್‌ಗೆ ಆಲೌಟಾಯಿತು.
ಝಿಂಬಾಬ್ವೆ ತಂಡ ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಪೀಟರ್ ಮೂರ್ ವಿಕೆಟ್‌ನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಎಡಗೈ ಸ್ಪಿನ್ನರ್ ಆಮಿರ್ ಹಂಝಾ ಅವರು ಸಲ್ಮಾನ್ ಮೀರ್ ವಿಕೆಟ್‌ನ್ನು ಕಬಳಿಸಿದ್ದಲ್ಲದೆ ಮುಂದಿನ ಓವರ್‌ನಲ್ಲಿ 4 ಎಸೆತಗಳಲ್ಲಿ ಮತ್ತೆರಡು ವಿಕೆಟ್‌ಗಳನ್ನು ಕಬಳಿಸಿದರು. ಆಗ ಝಿಂಬಾಬ್ವೆ 13 ರನ್‌ಗೆ 4 ವಿಕೆಟ್ ಕಳೆದುಕೊಂಡಿತು.
ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳಲು ವಿಫಲವಾದ ಝಿಂಬಾಬ್ವೆ ಪರ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಎರಡಂಕೆಯ ಸ್ಕೋರ್ ದಾಖಲಿಸಿದರು. ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿರುವ ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಹಾಗೂ ರಶೀದ್ ಖಾನ್ ಇಬ್ಬರು 5 ವಿಕೆಟ್‌ಗಳನ್ನು ಹಂಚಿಕೊಂಡರು. ಅರ್ಧಶತಕ ಬಾರಿಸಿದ್ದ ರಹಮತ್ ಶಾ(50 ರನ್, 79 ಎಸೆತ, 1 ಬೌಂಡರಿ) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ: 50 ಓವರ್‌ಗಳಲ್ಲಿ 253/9
(ರಹಮತ್ ಶಾ 50, ನೂರ್ ಅಲಿ ಝದ್ರಾನ್ 46, ಮುಹಮ್ಮದ್ ನಬಿ 48, ಎಂಪೊಫು 3-46)
ಝಿಂಬಾಬ್ವೆ: 13.5 ಓವರ್‌ಗಳಲ್ಲಿ 54 ರನ್‌ಗೆ ಆಲೌಟ್
(ಕ್ರಿಮರ್ ಅಜೇಯ 14, ಬರ್ಲ್ 11, ಅಮಿರ್ ಹಂಝಾ 3-20, ನಬಿ 3-14, ರಶೀದ್ ಖಾನ್ 2-8)







