ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಟಾಪ್ 8 ಉನ್ನತ ನಾಯಕರುಗಳ ಸಂಗಮ

ಉಳ್ಳಾಲ, ಫೆ.28: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಸೆಕ್ಟರಿನ ಮತ್ತು ಇದರ ಅಧೀನ ಹನ್ನೊಂದು ಶಾಖೆಗಳ ಟಾಪ್ 8 ಉನ್ನತ ನಾಯಕರುಗಳ ಸಂಗಮ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಪೇಟೆಯ ಪುರಸಭೆ ಸಮುದಾಯಭವನದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಕೋಡಿ ಶಾಖಾ ಕೋಶಾಧಿಕಾರಿ ಅತೀಖ್ ಕೋಡಿ ಖಿರಾಅತ್ ಪಠಿಸಿದರು. ಎಸ್ ವೈಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ಅಬೂ ಸುಹಾನಃ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹಜ್ ಸಮಿತಿ ಸದಸ್ಯರಾದ ಕೆ.ಎಂ.ಸಿದ್ದೀಕ್ ಮೋಂಟುಗೋಳಿ ಸಂಘಟನಾ ತರಗತಿ ನಡೆಸಿದರು. ಎಸ್ ವೈಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹನೀಫ್ ಹಾಜಿ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಪ್ರಧಾನ ಕಾರ್ಯದರ್ಶಿ ಅಶ್ರಫ್ ಹಾಜಿ ಬಳ್ಳಾರಿ, ಉಪಾಧ್ಯಕ್ಷ ತ್ವಾಹಿರ್ ಹಾಜಿ ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಅಲ್ತಾಫ್ ಕುಂಪಲ ಹಾಗು ಇಲ್ಯಾಸ್ ಕೈಕೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ಹಾಗೂ ಮಿಕ್ದಾದ್ ಮುಕ್ಕಚ್ಚೇರಿ, ಎಸ್ ವೈಎಸ್ ಮೇಲಂಗಡಿ ಬ್ರಾಂಚ್ ನಾಯಕ ಯೂಸುಫ್ ಮಿಲ್ಲತ್ ನಗರ, ಎಸ್ ವೈಎಸ್ ಮುಕ್ಕಚ್ಚೇರಿ ಬ್ರಾಂಚ್ ಉಪಾಧ್ಯಕ್ಷ ಅಬ್ಬಾಸ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಎಸ್ ವೈಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ಬೆಂಗಳೂರು ಡಿವಿಷನ್ ಸಮಿತಿ ಸದಸ್ಯ ಮುಸ್ತಫ ಮಾಸ್ಟರ್, ಉಳ್ಳಾಲ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಹಾಝ್ ಬಂಡಿಕೊಟ್ಯ, ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್, ಪ್ರಧಾನ ಕಾಯದರ್ಶಿ ತಶ್ರೀಫ್, ಆಝಾದ್ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಕೋಟೆಪುರ, ಕೋಡಿ ದೋಟ ಶಾಖಾಧ್ಯಕ್ಷ ಹಾಶಿರ್, ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಯು.ಟಿ ಒಂಭತ್ತುಕೆರೆ, ಪೇಟೆ ಶಾಖಾ ಕಾರ್ಯದರ್ಶಿ ಫಾಶಿರ್, ಸುಂದರಭಾಗ್ ಶಾಖಾಧ್ಯಕ್ಷ ಸಯೀದ್, ಪ್ರಧಾನ ಕಾರ್ಯದರ್ಶಿ ಅಫ್ರಿದ್ ಹಾಗು ಸತ್ತಾರ್ ಮೇಲಂಗಡಿ, ಮೆಹರಲಿ, ಮುಹಸಿನ್ ಬೊಟ್ಟು ಉಪಸ್ಥಿತರಿದ್ದರು. ಕ್ಯಾಂಪ್ ಅಮೀರರಾಗಿ ನೌಫಲ್ ಕೋಟೆಪುರ ಹಾಗು ಹಫೀಝ್ ಕೋಡಿ ಕಾರ್ಯ ನಿರ್ವಹಿಸಿದರು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹನೀಫ್ ಬೊಟ್ಟು ಕಾರ್ಯಕ್ರಮ ನಿರೂಪಿಸಿದರು.







