ಮೊಣಕಾಲಿನ ಸರ್ಜರಿ ನಂತರ ಸಮಸ್ಯೆ : ನಟ ಖಾದರ್ ಖಾನ್ ಹೆಚ್ಚಿನ ಚಿಕಿತ್ಸೆಗೆ ಕೆನಡಾಕ್ಕೆ

ಮುಂಬೈ,ಫೆ.28 : ಹಿರಿಯ ನಟ ಖಾದರ್ ಖಾನ್ ಅವರಿಗೆ ಇತ್ತೀಚೆಗೆ ಮೊಣಕಾಲಿನ ಶಸ್ತ್ರಕ್ರಿಯೆ ನಡೆಸಲಾಗಿದ್ದು ಆದರೆ ನಂತರ ಅವರ ಸ್ಥಿತಿ ಉಲ್ಬಣಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೆನಡಾಕ್ಕೆ ಕರೆದೊಯ್ಯಲಾಗಿದೆ. ಕಳೆದ ಮೂರು ವರ್ಷಗಳಿಂದ ಅಸೌಖ್ಯದಿಂದಿರುವ ನಟ ಸದ್ಯ ಗಾಲಿಕುರ್ಚಿಯಲ್ಲಿ ಅತ್ತಿತ್ತ ಓಡಾಡುವಂತಾಗಿದೆ.
ನಟನ ಹಿರಿಯ ಪುತ್ರ ಕೆನಡಾದಲ್ಲಿ ವಾಸಿಸುತ್ತಿದ್ದು ಅವರ ಜತೆಗೆ ಅವರ ಪತ್ನಿ ಕೂಡ ಕೆನಡಾಕ್ಕೆ ತೆರಳಿದ್ದಾರೆ.
ಖಾನ್ ಅವರ ಮೊಣಕಾಲಿನ ಶಸ್ತ್ರಕ್ರಿಯೆ ಸರಿಯಾಗಿ ನಡೆಸಿಲ್ಲವಾದ ಕಾರಣ ಅವರ ಸ್ಥಿತಿ ಬಿಗಡಾಯಿಸಿದೆ ಎಂದು ಅವರ ಸಹನಟ ಮತ್ತು ಸ್ನೇಹಿತ ಶಕ್ತಿಕಪೂರ್ ಹೇಳಿದ್ದಾರೆ.
ಆಗಸ್ಟ್ 2015ರಲ್ಲಿ ತಮ್ಮ ಚಿತ್ರ ಹೋಗಯಾ ದಿಮಾಗ್ ಕಾ ದಹಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದಾಗಲೇ ಖಾನ್ ಅವರು ಮಾತನಾಡುವಾಗ ತಡವರಿಸುತ್ತಿದ್ದುದು ಹಾಗೂ ನಡೆದಾಡಲು ಕಷ್ಟಪಡುತ್ತಿರುವುದು ಕಂಡು ಬಂದಿತ್ತು. ಅನಾರೋಗ್ಯದಿಂದಾಗಿ ತಮಗೆ ಯಾವ ಚಿತ್ರಗಳಲ್ಲಿ ನಟಿಸಲೂ ಆಫರ್ ಬರುತ್ತಿಲ್ಲವೆಂದೂ ಅವರು ಖೇದ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅವರನ್ನು ಹರಿದ್ವಾರದಲ್ಲಿರುವ ಬಾಬಾ ರಾಮದೇವ್ ಅವರ ಆಶ್ರಮದಲ್ಲಿ ಗಂಟು ನೋವು ಹಾಗೂ ಸಕ್ಕರೆ ಕಾಯಿಲೆಯ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ದಾಖಲಿಸಲಾಗಿತ್ತು.







