ಉಡುಪಿಯಲ್ಲಿ ಬ್ಯಾಂಕ್ ಮುಷ್ಕರ: ಮತಪ್ರದರ್ಶನ

ಉಡುಪಿ, ಫೆ.28: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಇಂದು ಹಮ್ಮಿಕೊಳ್ಳಲಾಗಿರುವ ಬ್ಯಾಂಕ್ ಮುಷ್ಕರದ ಪ್ರಯುಕ್ತ ಉಡುಪಿ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಸಂಘಟನೆಗಳ ಜಂಟಿ ಸಮಿತಿ ಉಡುಪಿಯ ಕೆ.ಎಂ.ಮಾರ್ಗದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಂದೆ ಮತ ಪ್ರದರ್ಶನ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಸುಸ್ತಿ ಸಾಲ ವಸೂಲು ಮಾಡಬೇಕು. ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಶೀಘ್ರ ನೇಮಕಾತಿ ಮಾಡಬೇಕು. ನೋಟು ರದ್ದು ಮಾಡಿ ಹೊಸ ನೋಟುಗಳ ಬಿಡುಗಡೆಯಾದಾಗ ಹೆಚ್ಚುವರಿ ಕಾರ್ಯ ನಿರ್ವಹಿಸಿದಕ್ಕೆ ಸೂಕ್ತ ಪರಿಹಾರ ಮತ್ತು ಎಲ್ಲರಿಗೂ ಪಿಂಚಣಿ ಸವಲತ್ತು ಒದಗಿಸಬೇಕು. ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ, ಅಧಿಕಾರಿಗಳ ಸಂಘಟನೆಯ ಪ್ರಮುಖರಾದ ಜಯಪ್ರಕಾಶ್ ರಾವ್, ಹೇಮಂತ್ ಯು. ಕಾಂತ್, ಬಿಇಎಫ್‌ಐ ಸಂಘಟನೆಯ ರವೀಂದ್ರ ಎ., ಎನ್‌ಸಿಬಿಇ ಸಂಘ ಟನೆಯ ಕೆ.ಆರ್.ಶೆಣೈ, ಸ್ಟೇಟ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪ್ರಕಾಶ್ ಜೋಗಿ, ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರವಿಕುಮಾರ್, ಕೆನರಾ ಬ್ಯಾಂಕ್ ನೌಕರರ ಸಂಘದ ವರದರಾಜ್, ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ನಿತ್ಯಾನಂದ ಹಾಗೂ ಅಧಿಕಾರಿ ಸಂಘಟನೆಯ ಮಾಧವ ಭಟ್, ಕಾರ್ಪೊರೇಶನ್ ಬ್ಯಾಂಕ್ ನೌಕರರ ಸಂಘಟನೆಯ ರಘುರಾಮ ಕೃಷ್ಣ ಬಲ್ಲಾಳ್, ಜಯನ್ ಮಲ್ಪೆ ಉಪಸ್ಥಿತರಿದ್ದರು.







