ಇಂಫಾಲ: ರಾಹುಲ್ ಭಾಷಣ ಮಾಡಬೇಕಿದ್ದ ಸ್ಥಳದಲ್ಲಿ ಬಾಂಬ್ ಪತ್ತೆ

ಇಂಫಾಲ, ಫೆ.28: ಮಣಿಪುರ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಭಾಷಣ ಮಾಡಬೇಕಿದ್ದ ಸ್ಥಳದ ಸಮೀಪ ಒಂದು ಬಾಂಬ್ ಪತ್ತೆಯಾಗಿದೆ.
ಪೂರ್ವ ಇಂಫಾಲದ ಖೊಂಗ್‌ಮಾನ್ ಬಶಿಖೊಂಗ್ ತುರೆಲ್ ಮಾಪಲ್ ಪ್ರದೇಶ ವ್ಯಾಪ್ತಿಯ ವಸತಿ ಕಟ್ಟಡವೊಂದರ ಗೇಟಿನ ಬಳಿ ಬಾಂಬ್ ಪತ್ತೆಯಾಯಿತು. ಬಳಿಕ ಇದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದ ಸಮೀಪದ ಊರಿನಲ್ಲಿ ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿದೆ.ರಾಜ್ಯದಲ್ಲಿ ಮಾರ್ಚ್ 4 ಮತ್ತು 8ರಂದು, ಎರಡು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
Next Story





