ಭಾರತೀಯನ ಹತ್ಯೆ ಆಘಾತಕಾರಿ: ಶ್ವೇತಭವನ

ವಾಶಿಂಗ್ಟನ್, ಫೆ. 28: ಭಾರತೀಯ ಇಂಜಿನಿಯರ್ ಶ್ರೀನಿವಾಸ ಕುಚಿಭೋಟ್ಲರ ಹತ್ಯೆ ಆಘಾತಕಾರಿಯಾಗಿದೆ ಎಂದು ಸೋಮವಾರ ಬಣ್ಣಿಸಿರುವ ಶ್ವೇತಭವನ, ಎಲ್ಲ ಅಮೆರಿಕನ್ನರ ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ರಕ್ಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬದ್ಧತೆ ಹೊಂದಿದ್ದಾರೆ ಎಂದಿದೆ.
‘‘ನಮ್ಮ ದೇಶದ ಈ ಮೂಲ ತತ್ವವನ್ನು ಸಂರಕ್ಷಿಸಲು ಅಧ್ಯಕ್ಷರು ಬದ್ಧರಾಗಿದ್ದಾರೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯನ್ ಸ್ಪೈಸರ್ ಹೇಳಿದರು.
ಭಾರತದ ವಿದೇಶ ಕಾರ್ಯದರ್ಶಿ ಎಸ್. ಜೈಶಂಕರ್ ವಾಶಿಂಗ್ಟನ್‌ಗೆ ಮೂರು ದಿನಗಳ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ಅಮೆರಿಕದಲ್ಲಿರುವ ಭಾರತೀಯರ ರಕ್ಷಣೆ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಭಾರತೀಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಕ್ಯಾನ್ಸಸ್‌ನಲ್ಲಿ ಇತ್ತೀಚೆಗೆ ನಡೆದ ಶಂಕಿತ ದ್ವೇಷ ದಾಳಿಯಲ್ಲಿ ಭಾರತೀಯ ಎಂಜಿನಿಯರ್‌ರನ್ನು ವ್ಯಕ್ತಿಯೊಬ್ಬ ಗುಂಡು ಹಾರಿಸಿ ಕೊಂದಿರುವುದನ್ನು ಸ್ಮರಿಸಬಹುದಾಗಿದೆ.
Next Story





