ತೊಕ್ಕೊಟ್ಟು ಕರ್ನಾಟಕ ಬ್ಯಾಂಕ್ ಗೆ ಬೆಂಕಿ: ನಂದಿಸಿದ ಸ್ಥಳೀಯರು

ಮಂಗಳೂರು: ಇಲ್ಲಿಗೆ ಸಮೀಪದ ತೊಕ್ಕೊಟ್ಟುವಿನ ಕರ್ನಾಟಕ ಬ್ಯಾಂಕ್ ಗೆ ಬೆಂಕಿ ಹತ್ತಿಕೊಂಡಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನೊಂದು ಕಡೆ ಕಿಡಿಗೇಡಿಗಳು ನಡೆಸಿದ ಕೃತ್ಯ ಇದಾಗಿರಬಹುದು ಎನ್ನಲಾಗಿದೆ.
ಬ್ಯಾಂಕಿನ ಕಿಟಕಿ ಬಳಿ ಕಾಣಿಸಿಕೊಂಡ ಬೆಂಕಿಯನ್ನು ಕಂಡ ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.
ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡದಾಗಬಹುದಾದ ಅಗ್ನಿ ಅನಾಹುತ ತಪ್ಪಿದಂತಾಗಿದೆ ಎಂದು ತಿಳಿದು ಬಂದಿದೆ.
Next Story





