ಮಲ್ಪೆ: ಎಟಿಎಂ ನಂಬರ್ ಪಡೆದು ವಂಚನೆ

ಮಲ್ಪೆ, ಫೆ.28: ಮೊಬೈಲ್ ಕರೆ ಮಾಡಿ ಎಟಿಎಂ ನಂಬರ್ ಪಡೆದು ಖಾತೆಯಿಂದ ಸಾವಿರಾರು ರೂ. ಹಣ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.24ರಂದು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಮಲ್ಪೆಯ ಲೀಲಾ ವತಿ ಬಂಗೇರ ಎಂಬವರ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್ ನಂಬರ್ ನೀಡುವಂತೆ ಕೇಳಿದ್ದನು.
ಅದರಂತೆ ಲೀಲಾವತಿ ನಂಬರ್ ನೀಡಿದ್ದರು. ಕೂಡಲೇ ಲೀಲಾವತಿಯವರ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 32,998ರೂ. ಹಣ ಡ್ರಾ ಆಗಿರುವ ಮೆಸೇಜ್ ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





