ಆರೆಸ್ಸೆಸ್ ಮನಸ್ಸು ಮಾಡಿದರೆ ಮುಖ್ಯಮಂತ್ರಿ ಹೊರಗಿಳಿಯಲು ಸಾಧ್ಯವಿಲ್ಲ : ಬಿಜೆಪಿ ನಾಯಕಿ

ಕ್ಯಾಲಿಕಟ್,ಮಾ.1: ಆರೆಸ್ಸೆಸ್ ಬಯಸಿದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಹೊರಗಿಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಬೆದರಿಕೆಯೊಡ್ಡುವ ಧಾಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಂಗಳೂರಿಗೆ ಹೋಗದಂತೆ ತಡೆಯುತ್ತೇವೆಂದು ಆರೆಸ್ಸೆಸ್ ಘೋಷಿಸಿಲ್ಲ ಮತ್ತು ಯಾವುದೇ ನಾಯಕ ಬೀದಿಯಲ್ಲಿ ಹೇಳಿದ್ದು ಆರೆಸ್ಸೆಸ್‌ನ ಹೇಳಿಕೆಯೆಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಮಂಗಳೂರಿಗೆ ಪಿಣರಾಯಿಯವರನ್ನು ಕಾಲಿಡಲು ನಾವು ಬಿಡುವುದಿಲ್ಲ ಎಂದು ಕೆ. ಸುರೇಂದ್ರನ್ ಈ ಹಿಂದೆ ಹೇಳಿದ್ದಾರಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಸುರೇಂದ್ರನ್ ಆರೆಸ್ಸೆಸ್‌ನ ವ್ಯಕ್ತಿಯಾಗಿದ್ದರೂ ಪತ್ರಿಕಾಗೋಷ್ಠಿ ಕರೆದು ಹಾಗೇ ಹೇಳಿಲ್ಲವಲ್ಲ ಎಂದು ಶೋಭಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಮಾತ್ರವೇ ಪಾರ್ಟಿಯ ನಿಲುವಾಗಿದೆಯೇ ಎನ್ನುವ ಪ್ರಶ್ನೆಗೆ ಶೋಭಾ ಉತ್ತರಿಸದೆ ನುಣುಚಿಕೊಂಡರು. ಕೇರಳದಲ್ಲಿ ಕಾಲಿಗೆ ಗೆಜ್ಜೆತೊಟ್ಟ ಪ್ರತಿಪಕ್ಷನಾಯಕ ಇದ್ದಾರೆಂದು ಶೋಭಾ ಇದೇ ವೇಳೆ ವ್ಯಂಗ್ಯವಾಡಿದರು. ಗೆಜ್ಜೆ ಧರಿಸುವುದು ಅಷ್ಟು ಕೆಟ್ಟ ವಿಚಾರವೇ ಎನ್ನುವ ಪ್ರಶ್ನೆಗೆ, ಪುರುಷರು ಗೆಜ್ಜೆ ಧರಿಸುವ ವಿಷಯವನ್ನು ನಾನು ಹೇಳಿದ್ದೇನೆಂದು ಶೋಭಾ ಸುರೇಂದ್ರನ್ ಉತ್ತರಿಸಿದರು ಎಂದು ವರದಿ ತಿಳಿಸಿದೆ.