ಬಿಎಸ್‌ವೈಯಿಂದ ಕಾಂಗ್ರೆಸ್ ಅಸ್ತಿತ್ವ ಹಾಳುಮಾಡಲು ಯತ್ನ: ಸಿಎಂ

ಬೆಂಗಳೂರು, ಮಾ.1: ಲೆಹರ್ ಸಿಂಗ್ ಡೈರಿ ನಕಲಿಯಾಗಿದ್ದರೆ, ಕಾಂಗ್ರೆಸ್‌ನ ಡೈರಿ ಕೂಡ ನಕಲಿ. ಲೆಹರ್ ಸಿಂಗ್ ಡೈರಿ ಬಗ್ಗೆ ಯಡಿಯೂರಪ್ಪ ಏನು ಹೇಳುತ್ತಾರೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಬಿಎಸ್‌ವೈ ಜಗತ್ತು, ದೇಶ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಸರಕಾರದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರಕಾರದ ಅಸ್ತಿತ್ವ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆ ಕಾಮಗಾರಿಗೆ ಟೆಂಡರ್ ನೀಡುವ ಸಂಬಂಧ ಕಾಂಗ್ರೆಸ್‌ಗೆ 65 ಕೋಟಿ ರೂ. ಕಮಿಶನ್ ಸಂದಾಯವಾಗಿದ್ದು, ಈ ಹಣ ನೇರವಾಗಿ ಸಿಎಂ ಕುಟುಂಬಕ್ಕೆ ಸಂದಾಯವಾಗಿದೆ ಎಂದು ಬಿಎಸ್‌ವೈ ಗಂಭೀರ ಆರೋಪ ಮಾಡಿದ್ದರು.
Next Story





