ದುಬೈ: ಮಾ.3ರಂದು ಬ್ಯಾರೀಸ್ ಕಲ್ಚರಲ್ ಫೋರಮ್ ವಾರ್ಷಿಕ ಮಹಾ ಸಭೆ
ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಇದರ 11ನೆ ವಾರ್ಷಿಕ ಮಹಾಸಭೆಯು ಮಾ.3ರಂದು ಶುಕ್ರವಾರ ಸಂಜೆ 6 ಗಂಟೆಗೆ ದುಬೈಯ ಕರಾಮದಲ್ಲಿರುವ ಬ್ಯಾಂಗಲೋರ್ ಎಂಪೈರ್ ಹೋಟೆಲ್ ಆಡಿಟೋರಿಯಂನಲ್ಲಿ ನಡೆಯಲಿದೆ. ಬಿಸಿಎಫ್ ಅಧ್ಯಕ್ಷ ಡಾ ಬಿ.ಕೆ.ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ವಾರ್ಷಿಕ ಮಹಾಸಭೆಗೆ ಬ್ಯಾರಿ ಭಾಂದವರನ್ನು ಆಮಂತ್ರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಹಾಸಭೆಯಲ್ಲಿ ಭಾಗವಹಿಸಲು ಬಯಸುವವರು ಭಾಗವಹಿಸುವ ಮುನ್ನ ಸಭೆ ನಡೆಯುವ ಸಭಾಂಗಣದ ಪ್ರವೇಶ ದ್ವಾರದಲ್ಲಿ ಇರುವ BCF ಸದಸ್ಯ ನೋಂದಾವಣಿ ಕೌಂಟರ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಬಿಸಿಎಫ್ ಸದಸ್ಯರಾಗಿ ನಂತರ ಮಹಾಸಭೆಯಲ್ಲಿ ಭಾಗವಹಿಸಬಹುದಾಗಿದೆ.
Next Story





