ಮಂಗಳೂರು: ಕುರ್-ಆನ್ ಕಂಠಪಾಟ ಸ್ಪರ್ಧೆಯಲ್ಲಿ ಫುಝೈಲ್ ಇಯಾದ್ ದ್ವಿತೀಯ ಸ್ಥಾನ

ಮಂಗಳೂರು, ಮಾ.1: ಮಿಸ್ಬಾಹುಲ್ ಉಲೂಂ ಗಂಗೊಳ್ಳಿ ಏರ್ಪಡಿಸಿದ ನಾಲ್ಕು ಜಿಲ್ಲೆಯ ಪವಿತ್ರ ಕುರ್-ಆನ್ ಕಂಠಪಾಟ ಸ್ಪರ್ಧೆಯಲ್ಲಿ ಇಕ್ರಾ ಅರಬಿಕ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಫುಝೈಲ್ ಇಯಾದ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎರಡು ವರ್ಷಗಳಲ್ಲಿ ಹಾಫಿಜ್ಹ್ (ಕುರ್ ಆನ್ ಕಂಠಪಾಠ) ಪದವಿ ಪಡೆದಿದ್ದಾರೆ. ಇವರು ಉಳ್ಳಾಲದ ಇಲ್ಯಾಸ್ ಹಾಗು ಇಮ್ತಿಯಾಝ್ ಬೇಗಂ ಅವರ ಪುತ್ರರಾಗಿದ್ದಾರೆ.
Next Story





