ಕಾಣೆಯಾದ ವೃದ್ಧೆಯ ಮೃತದೇಹ ಬೀದಿನಾಯಿಗಳು ಕಚ್ಚಿ ಎಳೆದ ಸ್ಥಿತಿಯಲ್ಲಿ ಪತ್ತೆ!

ಮಲಪ್ಪುರಂ,ಮಾ.1: ಜಾತ್ರೆಗೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದ ವೃದ್ಧ ಮಹಿಳೆಯ ಮೃತದೇಹ ಬೀದಿನಾಯಿಗಳು ಕಚ್ಚಿ ಸೀಳಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆಲಂಕೋಡ್ ಪಂದಾವೂರಿನ ಮೇಲಪುರಯ್ಕಲ್ ಕುಟ್ಟ ಎಂಬವರ ಪತ್ನಿ ಜಾನಕಿ(75)ಯವರ ಮೃತದೇಹ ಕಾಂಪ್ರದಲ್ಲಿ ಪತ್ತೆಯಾಗಿದೆ.
ಶುಕ್ರವಾರ ಶಿವರಾತ್ರೆಯಾದ್ದರಿಂದ ಅವರು ಜಾತ್ರೆಗೆ ಹೋಗಿದ್ದರು. ಜಾನಕಿ ಕಾಣೆಯಾಗಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ವರದಿ ತಿಳಿಸಿದೆ.
Next Story





