Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. 'ದುಬೈ Fashunity 2017'ನಲ್ಲಿ ಭಾರತೀಯ...

'ದುಬೈ Fashunity 2017'ನಲ್ಲಿ ಭಾರತೀಯ ಸಾಂಸ್ಕ್ರೃತಿಕ ಪರಂಪರೆಯನ್ನು ತೆರೆದಿಟ್ಟ KSCC

ವಾರ್ತಾಭಾರತಿವಾರ್ತಾಭಾರತಿ1 March 2017 5:33 PM IST
share
ದುಬೈ Fashunity 2017ನಲ್ಲಿ ಭಾರತೀಯ ಸಾಂಸ್ಕ್ರೃತಿಕ ಪರಂಪರೆಯನ್ನು ತೆರೆದಿಟ್ಟ  KSCC

ದುಬೈ, ಮಾ.೧: ಇಸ್ಲಾಮಿಕ್ ಎಫೇರ್ಸ್‌ & ಚಾರಿಟೇಬಲ್ ಆಕ್ಟಿವಿಟೀಸ್ ಮತ್ತು  ‌ಶೇಖ್ ಮುಹಮ್ಮದಿನ್ ರಾಶಿದ್ ಸೆಂಟರ್ ಫಾರ್ ಇಸ್ಲಾಮಿಕ್ ಕಲ್ಚರ್ ಜಂಟಿಯಾಗಿ ಝಾಹಿದಿಬ್ನು ಮುಹಮ್ಮದ್ ಫ್ಯಾಮಿಲಿ ಗ್ಯಾದರಿಂಗ್ ಅಲ್ ಖವಾನಿಝ್, ದುಬೈಯಲ್ಲಿ "Fashunity 2017" ಎಂಬ ಆಕರ್ಷಕ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಫೆಬ್ರವರಿ 23, ಗುರುವಾರದಂದು ಉದ್ಘಾಟನೆಗೊಂಡು 3 ದಿನಗಳ ವರೆಗೆ ನಡೆದ ಈ ಸಂಸ್ಕೃತಿ ಮತ್ತು ಸಂಪ್ರದಾಯ ವಸ್ತು ಪ್ರದರ್ಶನದಲ್ಲಿ ಸುಮಾರು 21 ರಾಷ್ಟ್ರಗಳು ಭಾಗವಹಿಸಿ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದರು.

ಯುಎಇಯ ದುಬೈ ಸರಕಾರದ ಸಮುದಾಯ ಅಭಿವೃದ್ಧಿ ಪ್ರಾಧಿಕಾರದಿಂದ (CDA) ನೋಂದಾಯಿತ ಸಂಸ್ಥೆಯಾದ 'ಕರ್ನಾಟಕ ಸ್ಪೋರ್ಟ್ಸ್ ಆಂಡ್ ಕಲ್ಚರಲ್ಕ್ಲಬ್' (KSCC) ಎಂಬ ಸಾಮಾಜಿಕ ಸಂಘಟನೆಯು ಭಾರತೀಯ ಪೆವಿಲಿಯನನ್ನು 'Incredible India' ಹೆಸರಿನಲ್ಲಿ ವ್ಯವಸ್ಥೆ ಮಾಡಿತ್ತು. ಭಾರತ ದೇಶದ ಸಾಂಸ್ಕ್ರತಿಕ ಆಕರ್ಷಣೆಗಳಾದ ಸಾಂಪ್ರದಾಯಿಕ ಉಡುಪು, ಆಹಾರ, ಪ್ರಸಿದ್ಧ ಹೆಗ್ಗುರುತುಗಳು ಮತ್ತು ದೇಶದ ಆಕರ್ಷಣೀಯ ಸ್ಮಾರಕಗಳ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮಸ್ಜಿದ್ ಎಫೇರ‍್ಸ್‌ನ ಮುಖ್ಯ ಕಾರ್ಯನಿರ್ವಾಹಕ ನಿದೇರ್ಶಕ ಡಾ.ಉಮರ್ ಖತೀಬ್ ಅವರು ಭಾರತೀಯ ಪೆವಿಲಿಯನನ್ನು ಉದ್ಘಾಟಿಸಿದರು. ಭಾರತೀಯ ಪೆವಿಲಿಯನನ್ನು KSCC ಸುಂದರವಾಗಿ ವಿನ್ಯಾಸಗೊಳಿಸಿತ್ತು. ಭಾರತದ ವಿವಿಧ ಸಂಸ್ಕೃತಿಯನ್ನು ಸೂಚಿಸುವ ಸಾಂಪ್ರದಾಯಿಕ ಉಡುಗೆ ಧರಿಸಿದ ಮಕ್ಕಳು, ಭೇಟಿ ಕೊಟ್ಟ ಸಂದರ್ಶಕರನ್ನು ಸ್ವಾಗತಿಸಿದರು.

ಸಮಾರೋಪ ದಿನದಂದು, ಇಸ್ಲಾಮಿಕ್ ಎಫೇರ‍್ಸ್ & ಚಾರಿಟೇಬಲ್ ಆಕ್ಟಿವಿಟೀಸ್ ಇದರ ಡೈರೆಕ್ಟರ್ ಜನರಲ್  ಹಮದ್ಅ ಲ್ಶೈಬಾನಿರವರು ಭಾರತೀಯ ಪೆವಿಲಿಯನಿಗೆ ಭೇಟಿ ನೀಡಿದರು.

ಭಾರತೀಯ ಪೆವಿಲಿಯನಿನ ಮಾರ್ಗದರ್ಶಕ ಮುಹಮ್ಮದ್ ರಝ್ಭಾ ಭಾರತೀಯಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ವಿವರಣೆ ನೀಡಿದರು. ಭಾರತೀಯ ಪೆವಿಲಿಯನ್ ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರಶಂಸಿಸಿದ ಹಮದ್ಅ ಲ್ಶೈಬಾನಿರವರಿಗೆ KSCC ವ್ಯವಸ್ಥಾಪಕ ಮುಹಮ್ಮದ್ ಶಫಿ ಮತ್ತು ಕಾರ್ಯಕಾರಿಣಿ ಸದಸ್ಯ ನಾಸಿರ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು. 

'Fashunity' ಎಂಬ ಹೆಸರಿನಲ್ಲಿ ನಡೆದ ಈ ವಸ್ತು ಪ್ರದರ್ಶನ ವಿವಿಧ ಸಂಸ್ಕೃತಿಗಳ ಪುನಶ್ಚೇತನಕ್ಕೆ ಮತ್ತು ಯುಎಇಯಲ್ಲಿರುವ ಜನರಿಗೆ ತಮ್ಮ ಮೂಲವನ್ನುನೆನಪಿಸುವ ಉದ್ದೇಶವನ್ನು ಹೊಂದಿದ್ದು, ವೈವಿಧ್ಯಮಯ ಸಂಸ್ಕೃತಿಗಳ ಒಂದು ಸಮ್ಮಿಲನ ಸ್ಥಾನವಾಗಿತ್ತು. ಯುಎಇ  ವೈವಿಧ್ಯತೆಯುಯುಕೆ, ಫಿಲಿಪೈನ್ಸ್, ಚೀನಾ, ಬ್ರೆಝಿಲ್, ಇಂಡೋನೇಷ್ಯಾ, ಕೊಲಂಬಿಯಾ, ವೆನೆಜುವೇಲಾ, ಅರ್ಜೆಂಟೀನಾ, ಖಝಕಿಸ್ತಾನ, ಚಿಲಿ, ಉಕ್ರೈನ್, ಯುಎಇ, ಮೆಕ್ಸಿಕೋ, ಪೆರು, ಪಾಕಿಸ್ತಾನ, ಈಕ್ವೆಡಾರ್, ಚೀನಾ, ಇಥಿಯೋಪಿಯ, ಕಿರ್ಗಿಸ್ತಾನ್ ಮತ್ತು ಇತರ ದೇಶಗಳ ಜನರನ್ನು ಒಳಗೊಂಡಿದೆ.

'Fashunity 2017' ಎಂಬ ಈ ಆಕರ್ಷಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಎಲ್ಲಾ ರೀತಿಯ ಬೆಂಬಲಕೊಟ್ಟು ಸಹಕರಿಸಿದ ಭಾರತೀಯ ಪ್ರವಾಸೋಧ್ಯಮ ಮಂತ್ರಾಲಯ ಹಾಗೂ ಜನರಲ್ ಕೌನ್ಸಿಲೇಟ್ ಆಫ್ ಇಂಡಿಯಾಗೆ KSCC ವತಿಯಿಂದ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಯಿತು.

ಅದೇ ರೀತಿ ಈ  ಪ್ರದರ್ಶನದಲ್ಲಿ ಭಾಗವಹಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಎಲ್ಲಾ ಸಂದರ್ಶಕರಿಗೆ ಮತ್ತು ಈ ವಿಶೇಷ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ KSCC ಸದಸ್ಯರೆಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X