ಮಗಳಿಗೆ ಲೈಂಗಿಕ ಕಿರುಕುಳ ನೀಡಿದಾತನನ್ನು ಕಡಿದು ಕೊಲೆ ಮಾಡಿದ ತಂದೆ
.jpg)
ಹೈದರಾಬಾದ್,ಮಾ.1: ಮಗಳಿಗೆ ಲೈಂಗಿಕ ಕಿರುಕಳ ನೀಡಿದ ಆರೋಪಿಯನ್ನು ಕಡಿದು ಕೊಲೆಮಾಡಿದ ತೆಲಂಗಾಣ ರಾಷ್ಟ್ರಸಮಿತಿ ನಾಯಕ ಶ್ಯಾಂ ಸುಂದರ್ ರೆಡ್ಡಿಯವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ರಾಜೇಶ್(32) ಎಂಬಾತನನ್ನು ಶ್ಯಾಂಸುಂದರ್ ಸಹಾಯಕರ ನೆರವಿನಲ್ಲಿ ಕೊಲೆಮಾಡಿದ್ದಾರೆ. ಕಿರುಕುಳದ ನಂತರ ಶ್ಯಾಂಸುಂದರ್ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸೋಮವಾರ ರಾಜೇಶ್, ಗೆಳೆಯನೊಂದಿಗೆ ಬಾರಿನಿಂದ ಹೊರಟು ಹೋಗುತ್ತಿದ್ದಾಗ ಶ್ಯಾಂಸುಂದರ್ ರೆಡ್ಡಿ ಮತ್ತು ಸಹಾಯಕರು ಅವರಿಬ್ಬರನ್ನು ತಡೆದು ನಿಲ್ಲಿಸಿ ಕಡಿದಿದ್ದಾರೆ. ರಾಜೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಶ್ಯಾಂಸುಂದರ್ ಮತ್ತು ಗೆಳೆಯರನ್ನು ಕೊಲೆ ಆರೋಪದಲ್ಲಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಶ್ಯಾಂಸುಂದರ್ ರೆಡ್ಡಿಯ 22ವರ್ಷದ ಪುತ್ರಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪದಡಿಯಲ್ಲಿ ರಾಜೇಶ್ ವಿರುದ್ಧ ಪ್ರಕರಣದಾಖಲಾಗಿದೆ. ಘಟನೆ 2015ರಲ್ಲಿ ನಡೆದಿತ್ತು. ಶ್ಯಾಂಸುಂದರ್ ಪುತ್ರಿ ನೀಡಿದ ದೂರಿನ ಪ್ರಕಾರ ಆತನನ್ನು ಪೊಲೀಸರು ಬಂಧಿಸಿದ್ದರು. ಕೆಲವೇ ದಿವಸಗಳಲ್ಲಿ ಆತ ಜಾಮೀನು ಮೂಲಕ ಬಿಡುಗಡೆಗೊಂಡಿದ್ದ. ಇದರಿಂದ ನೊಂದಿದ ಅವರ ಪುತ್ರಿ ನಾಗರ್ಜುನ ಸಾಗರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಶ್ಯಾಂಸುಂದರ್ ರೆಡ್ಡಿಯ ಪುತ್ರಿ ಆತ್ಮಹತ್ಯೆ ನಡೆದ ಬಳಿಕ ರಾಜೇಶ್‌ನನ್ನು ಒಂದು ವರ್ಷ ಜೈಲಿನಲ್ಲಿರಿಸಲಾಗಿತ್ತು. ಈತ 2016 ಜೂನ್‌ನಲ್ಲಿ ಜೈಲಿನಿಂದ ಬಿಡುಗಡೆಗೊಂಡು ಹೊರಬಂದಿದ್ದ. ರಾಜೇಶ್ ವಿರುದ್ದ ಹತ್ತರಷ್ಟು ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.







