ಮೂಡುಬಿದಿರೆ: ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ

ಮೂಡುಬಿದಿರೆ : ದ.ಕ.ಜಿ.ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಇವುಗಳ ವತಿಯಿಂದ ಇತರೆ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿರುವ ಕರ್ನಾಟಕ ದರ್ಶನಪ್ರವಾಸ ಕಾರ್ಯಕ್ರಮಕ್ಕೆ ಬುಧವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
2 ಬಸ್ಸುಗಳಲ್ಲಿ, ಎಸ್‌ಸಿ ಎಸ್‌ಟಿಯ 55 ವಿದ್ಯಾರ್ಥಿಗಳು ಮತ್ತು ಇತರೆ 50 ವಿದ್ಯಾರ್ಥಿಗಳು 5 ದಿನಗಳ ಕಾಲ ಮೂಡುಬಿದಿರೆ ವಲಯದಿಂದ ಒಟ್ಟು 105 ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದು, ಬೇಲೂರು, ಹಳೆಬೀಡು, ಬಾದಾಮಿ, ಮುರುಡೇಶ್ವರ, ಚಿತ್ರದುರ್ಗ, ಹಂಪೆ ಸಹಿತ 12 ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ.
ಶಿಕ್ಷಕರಾದ ಪ್ರಾಂತ್ಯ ಸ.ಪ್ರೌ.ಶಾಲೆಯ ವಿನಯ ಕುಮಾರ್, ಪುಚ್ಚಮೊಗರು ಸ.ಉ.ಪ್ರಾ.ಶಾಲೆಯ ಗಿರೀಶ್, ಹಂಡೇಲು ಶಾಲೆಯ ದೊರೆಸ್ವಾಮಿ ಕೆ.ಎನ್, ಪಡುಕೊಣಾಜೆಯ ಗಂಗಾಧರ ಪಾಟೀಲ್, ಶಿಕ್ಷಕಿಯರಾದ ಪ್ರಾಂತ್ಯ ಹೈಸ್ಕೂಲ್‌ನ ಹರಿಣಿ, ಕೋಟೆಬಾಗಿಲು ಜನರಲ್‌ನ ಶಾಲಿನಿ, ಬಿ.ಇ.ಓ ಕಛೇರಿಯ ಲಕ್ಷ್ಮೀ ವಿದ್ಯಾರ್ಥಿಗಳ ತಂಡದಲ್ಲಿದ್ದರು.
Next Story





