ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ: ಇಬ್ರಾಹಿಂ ಫೈಝಿ

ಉಳ್ಳಾಲ, ಮಾ.1: ಬಡ ವಿದ್ಯಾರ್ಥಿಗಳಿಂದು ಉತ್ತಮ ರೀತಿಯ ಶಿಕ್ಷಣ ಪಡೆಯಲು ಸ್ಥಳೀಯ ಅನೇಕ ಸಂಘಸಂಸ್ಥೆಗಳ ಯೋಗದಾನವಿದ್ದು ಪ್ರತಿಯೊಂದು ಸಂಘಟನೆಗಳು ಇಂತಹ ಸಮಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿದಾಗ ಸಮಾಜದ ಸರ್ವತೋಮುಖ ಏಳಿಗೆ ಸಾಧ್ಯ ಎಂದು ಉಚ್ಚಿಲ ಜುಮಾ ಮಸೀದಿಯ ಮುದರ್ರಿಸರಾದ ಬಹು.ಮೌಲಾನಾ ಇಬ್ರಾಹಿಂ ಫೈಝಿ ಉದ್ಯಾವರ ಹೇಳಿದರು.
ಸೋಮೇಶ್ವರ ಉಚ್ಚಿಲದ 407 ಜುಮಾ ಮಸೀದಿ ಆಶ್ರಯದಲ್ಲಿ 33ನೇ ದ್ಸಿಕ್ರ್, ಸ್ವಲಾತ್ ವಾರ್ಷಿಕೋತ್ಸವ ಮತ್ತು ದರ್ಸ್ ವಿದ್ಯಾರ್ಥಿಗಳ ವಾರ್ಷಿಕ ಹಾಗೂ 4 ದಿವಸಗಳ ದಾರ್ಮಿಕ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣಗೈದರು.
ಉಚ್ಚಿಲ ಜುಮಾ ಮಸೀದಿಯ ಜಮಾಅತ್ ವತಿಯಿಂದ ಮದರಸದ ನಿರ್ವಹಣೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಇದರಲ್ಲಿ ಮದರಸದ ವಿದ್ಯಾರ್ಥಿಗಳ ಪಾತ್ರ ಗಣನೀಯವಾಗಿದೆ. ಮದರಸಗಳ ಕಾರ್ಯಕ್ರಮಗಳಿಗೆ ಸ್ಥಳೀಯ ಅನೇಕ ಸಂಘ ಸಂಸ್ಥೆಗಳು ಅವಿರತವಾಗಿ ಸಹಾಯ ಹಸ್ತವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬಹು.ಕೆ.ಪಿ ಹುಸೈನ್ ಸಅದಿ,ಕೆ.ಸಿ ರೋಡ್ ಅವರು ವಿವಿಧ ಸ್ಫರ್ಧೆಯಲ್ಲಿ ಸ್ಥಾನಗಳಿಸಿದ ಮದರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಜ.ಸಿ.ಎ.ಮಜೀದ್ ಹಾಜಿ,ಉಚ್ಚಿಲ ,ಬಹು.ಮೌಲಾನಾ ಮುನೀರ್ ಸಖಾಫಿ, ಜ.ಯು.ಅಬೂಬಕ್ಕರ್ ಹಾಜಿ, ಜ.ಇಸ್ಮಾಯಿಲ್ ಹಾಜಿ ಕೊಪ್ಪಳ, ಕೆ.ಎಮ್ ಅಬ್ಬಾಸ್ ಹಾಜಿ ಮಜಲ್, ಸುಲೈಮಾನ್ ಹಾಜಿ, ಅಬ್ದುಲ್ ಅಝೀರ್, ಎಸ್.ಬಿ.ಮಹಮ್ಮದ್ ಹನೀಫ್, ಕೆ.ಎಮ್ ಇಬ್ರಾಹಿಂ, ಎಮ್.ಎಮ್.ಅಬ್ಬಾಸ್ ಹಾಜಿ, ಉಮರ್ ಪೆರಿಬೈಲ್,ಅಬ್ದುಲ್ ಸಲಾಂ ಯು. ಯು.ಬಿ ಮಹಮ್ಮದ್ ಹಾಜಿ, ಜ.ಎನ್.ಇಬ್ರಾಹಿಂ ನಯಾಪಟ್ಣ, ಜ.ಅಬ್ದುಲ್ ಖಾದರ್ ಹಾಜಿ ಚಕ್ಕಿಹಿತ್ಲು, ಜ.ಅಬ್ದುಲ್ ಸಲಂ ಉಚ್ಚಿಲ ನಯಾಪಟ್ಣ ಇದ್ದರು.







