ಗಂಗೊಳ್ಳಿ: ಮನೆ ನಿವೇಶನ ರಹಿತ ಅರ್ಜಿದಾರರ ಸಮಾವೇಶ

ಗಂಗೊಳ್ಳಿ, ಮಾ.1: ಗಂಗೊಳ್ಳಿ ವಿರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಮನೆ ನಿವೇಶನ ರಹಿತರ ಅರ್ಜಿದಾರರ ಸಮಾವೇಶವನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ ಉದ್ಘಾಟಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಪೂರೈಸಿದರು ಈಗಲೂ ಬಡತನ, ನಿರುದ್ಯೋಗ ಹಸಿವು ಮಹಿಳೆಯರ ಮೇಲೆ ದೌರ್ಜನ್ಯ ಜಾತಿ ತಾರತಮ್ಯ ಅಸ್ಪಶ್ಯತೆ ಕಡಿಮೆಯಾಗಲಿಲ್ಲ. ದೇಶಾದ್ಯಂತ 20 ಕೋಟಿ, ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಕೃಷಿ ಕೂಲಿಕಾರರು ಇದ್ದಾರೆ. ಪ್ರತಿಯೊಬ್ಬನ ತಲೆ ಮೇಲೊಂದು ಸೂರು ನಮ್ಮ ಮೂಲಭೂತ ಹಕ್ಕು ಎಂದು ನಾಗರತ್ನ ನಾಡ ಹೇಳಿದರು.
ಸಂಘದ ಗಂಗೊಳ್ಳಿ ಗ್ರಾಮ ಸಮಿತಿಯ ಕಾರ್ಯದರ್ಶಿ ಅರುಣ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಯು.ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಮುಖಂಡರಾದ ರಾಜೀವ ಪಡು ಕೋಣೆ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ, ಆನಂದ ಗಂಗೊಳ್ಳಿ ಮೊದ ಲಾದವರು ಉಪಸ್ಥಿತರಿದ್ದರು.
Next Story





