‘ಹಾರ್ವರ್ಡ್ ಲಾ ರಿವ್ಯೆ’ಗೆ ಮೊದಲ ಕರಿಯ ಮಹಿಳಾ ಅಧ್ಯಕ್ಷೆ

ನ್ಯೂಯಾರ್ಕ್, ಮಾ. 1: ಪ್ರತಿಷ್ಠಿತ ‘ಹಾರ್ವರ್ಡ್ ಲಾ ರಿವ್ಯೆ’ ಪತ್ರಿಕೆಯ 130 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕರಿಯ ಮಹಿಳೆಯೊಬ್ಬರನ್ನು ಅಧ್ಯಕ್ಷೆಯನ್ನಾಗಿ ಆರಿಸಲಾಗಿದೆ.
ಇಪ್ಪತ್ತೇಳು ವರ್ಷಗಳ ಹಿಂದೆ ಮೊದಲ ಕರಿಯ ಪುರುಷರೊಬ್ಬರನ್ನು ಈ ಹುದ್ದೆಗೆ ಆರಿಸಲಾಗಿತ್ತು. ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ.
ನೈಜೀರಿಯದಿಂದ ವಲಸೆ ಬಂದ ದಂಪತಿಯ ಮೂರನೆ ಪುತ್ರಿ, 24 ವರ್ಷದ ಇಮೇಲ್ಮ್ ಉಮಾನಾ ಅಧ್ಯಕ್ಷ ಹುದ್ದೆಗೆ ಹೊಸದಾಗಿ ಆಯ್ಕೆಯಾದವರು.
ಪತ್ರಿಕೆಯ 92 ವಿದ್ಯಾರ್ಥಿ ಸಂಪಾದಕರು ಉಮಾನಾರನ್ನು ಪತ್ರಿಕೆಯ 131ನೆ ವರ್ಷದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.
41 ವರ್ಷಗಳ ಮೊದಲು ಈ ಹುದ್ದೆಗೆ ಮೊದಲ ಮಹಿಳೆ (ಸುಸಾನ್ ಎಸ್ಟ್ರಿಚ್)ಯನ್ನು ಆಯ್ಕೆ ಮಾಡಲಾಗಿತ್ತು.
Next Story





