ಕಲ್ಮಾಡಿ: ಗರೋಡಿಗಳ ಗುರಿಕಾರರ ಸಮಾಲೋಚನಾ ಸಭೆ

ಉಡುಪಿ, ಮಾ.1: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಶ್ರಯದಲ್ಲಿ ಎ.23ರಂದು ಉಡುಪಿಯ ಪುರಭವನದಲ್ಲಿ ನಡೆಯಲಿರುವ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿಗಳ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಪೂರ್ವಭಾವಿ ಸಭೆ ಕಲ್ಮಾಡಿ ಶ್ರೀಬ್ರಹ್ಮಬೈದೇರುಗಳ ಗರೋಡಿಯಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಮ್. ಪೂಜಾರಿ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಗರೋಡಿಗಳ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಔಚಿತ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ವಿವಿಧ ಗರೋಡಿಗಳ ಗುರಿಕಾರರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನಿತ್ತರು.
ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ ಇದರ ಆಡಳಿತ ಸಮಿತಿಯ ಅಧ್ಯಕ್ಷ ಪ್ರಕಾಶ್ ಕರ್ಕೇರ ಕೊಪ್ಪಲ್‌ತೋಟ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಉಪಾಧ್ಯಕ್ಷ ಶಿವಪ್ರಸಾದ್ ಪಾಲನ್ ಬೆಂಗ್ರೆ, ದಿವಾಕರ ಸನಿಲ್ ಮಲ್ಪೆ, ಗೌರವ ಸಲಹೆಗಾರ ಎ.ಶಿವಕುಮಾರ್ ಅಂಬಲಪಾಡಿ, ರಾಜು ಪೂಜಾರಿ ಉಪ್ಪೂರು, ಕೋಶಾಧಿ ಕಾರಿ ಕುಶಲ್ ಕರ್ಕೇರ ನೇಜಾರು, ಆಡಳಿತ ಸಮಿತಿ ಸದಸ್ಯರಾದ ವಿಶುಕುಮಾರ್ ಕಲ್ಯಾಣಪುರ, ವಿಜಯ ಕೋಟ್ಯಾನ್ ಪಿತ್ರೋಡಿ, ಯೋಗೀಶ್ ಕೋಟ್ಯಾನ್ ಉದ್ಯಾವರ, ರಿಕೇಶ್ ಪಾಲನ್ ಕಡೆಕಾರು, ಅನಿಲ್ ಕುಮಾರ್ ಬಡಗುಬೆಟ್ಟು, ದಿನೇಶ್ ಪರ್ಕಳ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಉಪಾಧ್ಯಕ್ಷ ಹಾಗೂ ಸಮಾಲೋಚನಾ ಸಭೆಯ ಸಂಚಾಲಕ ಮಹೇಶ್ ಎಮ್. ಪೂಜಾರಿ ಮಲ್ಪೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಲ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಶರತ್ ಜತ್ತನ್ ಕಲ್ಯಾಣಪುರ ವಂದಿಸಿದರು.







