ಎಸ್ಸೆಸ್ಸೆಫ್ ಕೋಟೆಪುರ ಕೋಡಿ ವತಿಯಿಂದ ಬಡ ಕುಟುಂಬದ ಹೆಣ್ಣಿನ ಮದುವೆಗೆ ಬಂಗಾರ ದಾನ

ಮಂಗಳೂರು, ಮಾ.1: ಎಸ್ಸೆಸ್ಸೆಫ್ ಕೋಟೆಪುರ ಕೋಡಿ ಶಾಖೆ ಹಾಗು ಎಸ್ ವೈ ಎಸ್ ಕೋಟೆಪುರ ಕೋಡಿ ಬ್ರಾಂಚ್ ವತಿಯಿಂದ ಉಳ್ಳಾಲ ಕೋಡಿಯ ಬಡ ಕುಟುಂಬದ ಅನಾಥ ಹೆಣ್ಣಿನ ಮದುವೆಗೆ ಎರಡು ಪವನ್ ಬಂಗಾರ ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಕೋಟೆಪುರ ಕೋಡಿ ಅಧ್ಯಕ್ಷರಾದ ಆತೂರ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಬ್ದುಲ್ ಖಾದರ್ ಕೋಡಿ, ಅಬ್ದುಲ್ ಅಝೀಝ್ ಕೋಡಿ ಸಿ ರೋಡ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಅತೀಖ್ ಕೋಡಿ ಅಹಮ್ಮದಾಕ ಹಾಗು ಮೂಸಾ ಕುಞ್ಞಿ ಹಾಜಿ ಉಪಸ್ಥಿತರಿದ್ದರು
Next Story





