ಭಾರತದ ಅಂಡರ್-17 ವಿಶ್ವಕಪ್ ತಂಡಕ್ಕೆ ಮಾಟೊಸ್ ಕೋಚ್

ಹೊಸದಿಲ್ಲಿ, ಮಾ.1: ಮುಂಬರುವ ಫಿಫಾ ಅಂಡರ್-17 ವಿಶ್ವಕಪ್‌ಗೆ ಭಾರತದ ಅಂಡರ್-17 ವಿಶ್ವಕಪ್ ಫುಟ್ಬಾಲ್ ತಂಡಕ್ಕೆ ಪೋರ್ಚುಗಲ್‌ನ ಲೂಯಿಸ್ ನಾರ್ಟನ್ ಮಾಟೊಸ್‌ರನ್ನು ಮುಖ್ಯ ಕೋಚ್ ಆಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಬುಧವಾರ ನೇಮಕ ಮಾಡಿದೆ.
ಭಾರತದ ಕ್ರೀಡಾ ಪ್ರಾಧಿಕಾರದ ಪ್ರತಿನಿಧಿಗಳು ಸೇರಿದಂತೆ ಎಐಎಫ್‌ಎಫ್ ಸಲಹಾ ಸಮಿತಿಯನ್ನು ಭೇಟಿ ಮಾಡಿರುವ ಮಾಟೊಸ್ ಸಾಯ್ ಪ್ರಧಾನ ನಿರ್ದೇಶಕ ಶ್ರೀನಿವಾಸ್‌ರೊಂದಿಗೆ ಸೋಮವಾರ ಸಂಜೆ ಮಾತುಕತೆ ನಡೆಸಿದ್ದಾರೆ. ಮುಂಬೈಗೆ ತೆರಳಿದ ಮಾಟೊಸ್ ಎಐಎಫ್‌ಎಫ್ ಅಧ್ಯಕ್ಷ ಪುಫುಲ್ ಪಟೇಲ್‌ರನ್ನು ಮಂಗಳವಾರ ಭೇಟಿಯಾಗಿದ್ದಾರೆ.
‘‘ಯುವ ಆಟಗಾರರೊಂದಿಗೆ ಕೆಲಸ ಮಾಡಿರುವ ಮಾಟೊಸ್ ಅನುಭವ ನಮ್ಮ 17 ವರ್ಷದೊಳಗಿನ ತಂಡಕ್ಕೆ ನೆರವಾಗುವ ವಿಶ್ವಾಸವಿದೆ. ಮುಂಬರುವ ವಿಶ್ವಕಪ್‌ನಲ್ಲಿ ನಮ್ಮ ಹುಡುಗರು ಉತ್ತಮ ಪ್ರದರ್ಶನ ನೀಡುವಂತಾಗಲು ಮಾಟೊಸ್ ಮಾರ್ಗದರ್ಶನವನ್ನು ನಾವು ನಿರೀಕ್ಷಿಸುತ್ತಿದ್ದೇವೆ’’ ಎಂದು ಪಟೇಲ್ ಪ್ರತಿಕ್ರಿಯಿಸಿದರು.
Next Story





