ಸಅದಿಯ: ಎಸ್ಸೆಸ್ಸೆಫ್ ರಾಜ್ಯ ನಾಯಕರ ಭೇಟಿ

ಕಾಸರಗೋಡು, ಮಾ.1: ಗ೦ಗಾವತಿಯಲ್ಲಿ ಆಯ್ಕೆಯಾದ ಎಸ್ಸೆಸ್ಸೆಫ್ ರಾಜ್ಯ ನಾಯಕರು ಏಷ್ಯಾ ಖಂಡದ ಅತೀ ದೊಡ್ಡ ವಿದ್ಯಾ ಗೋಪುರ ಜಾಮಿಯಃ ಸಅದಿಯ ಅರಬಿಯ್ಯಃ ಸ೦ದರ್ಶಿಸಿದರು. ಸಂಸ್ಥೆಯ ಕನ್ನಡ ವಿದ್ಯಾರ್ಥಿಗಳ ಒಕ್ಕೂಟವಾದ MSKSVಯು ಅವರನ್ನು ಸ್ವಾಗತಿಸಿದರು.
ಸಮಸ್ತ ನಿಕಟ ಪೂರ್ವ ನಾಯಕರೂ, ಸಂಸ್ಥೆಯ ಶಿಲ್ಪಿಯೂ ಆದ ಮರ್ಹೂಂ ನೂರುಲ್ ಉಲಮಾ(ಖ.ಸಿ) ಮಖ್ಬರ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ನಂತರ "ಸಅದಿಯ್ಯ ಅಡಿಟೋರಿಯಂ"ನಲ್ಲಿ ನಾಯಕರನ್ನು ಸನ್ಮಾನಿಸಲಾಯಿತು.
ರಾಜ್ಯ ಡೆಪ್ಯೂಟಿ ಪ್ರಸಿಡೆಂಟ್ ಅಸ್ಸಯ್ಯದ್ ಹಾಮೀಂ ಶಿಹಾಬುದ್ದೀನ್ ತಂಙಳ್ ಮೂಡಿಗೆರೆಯವರ ದುಆ ದೊಂದಿಗೆ ಚಾಲನೆಯಾಯಿತು. ಸಅದಿಯ್ಯ ಪ್ರೊಫೆಸರ್ ಬಹು/ಸ್ವಾಲಿಹ್ ಸಅದಿಯವರು ನಾಯಕರನ್ನು ಸನ್ಮಾನಿಸಿ ಶುಭ ಹಾರೖೆಸಿದರು.
ಎಸ್ಸೆಸ್ಸೆಫ್ ರಾಜ್ಯಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಗೇರಿ ವಿದ್ಯಾರ್ಥಿಗಳಿಗೆ ಸದುಪದೇಶ ನೀಡದರು.
ರಾಜ್ಯ ನಾಯಕರಾದ ಅಡ್ವಕೇಟ್ ಕೆ.ಎಂ. ಇಲ್ಯಾಸ್ ನಾವುಂದ, ಸಿ.ಎ ಯಾಖೂಬ್ ಮಾಸ್ಟರ್ ಕೊಳಕೇರಿ, ಹಾಫಿಝ್ ಸುಫ್ಯಾನ್ ಸಖಾಫಿ, ಹಸೈನಾರ್ ಆನೆಮಹಲ್, ಅಬ್ದು ರ್ರಹ್ಮಾನ್ ಮೊಗರ್ಪಣೆ, ನವಾಝ್ ಭಟ್ಕಳ ಉಪಸ್ಥಿತರಿದ್ದರು.
ಸಅದಿಯ್ಯಾ ದಅ್ ವಾ ಅಧ್ಯಾಪಕ ಆಬಿದ್ ಸಅದಿ ಧನ್ಯವಾದವಿತ್ತರು.ಕಾರ್ಯಕ್ರಮವನ್ನು MSKSV ಅಧ್ಯಕ್ಷ ಮನ್ಸೂರ್ ಅಹ್ಮದ್ ನಿರೂಪಿಸಿದರು.







