ದ.ಕ. ಟ್ವೇಕಾಂಡೋ ತಂಡಕ್ಕೆ ಹತ್ತು ಚಿನ್ನ
ಕಾರ್ಮೆಲ್ ಕಪ್

ಬೆಂಗಳೂರು, ಮಾ.1: ಬಸವೇಶ್ವರ ನಗರದಲ್ಲಿ ಇತ್ತೀಚೆಗೆ ನಡೆದ 6ನೆ ಕಾರ್ಮೆಲ್ ಕಪ್ ಟ್ವೇಕಾಂಡೋ ಓಪನ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ದ.ಕ.ಜಿಲ್ಲೆಯ ತಂಡ ಒಟ್ಟು ಹತ್ತು ಚಿನ್ನದ ಪದಕಗಳನ್ನು, ಹದಿನೈದು ಬೆಳ್ಳಿಪದಕಗಳನ್ನು ಹಾಗೂ ಹದಿನಾರು ಕಂಚಿನ ಪದಕಗಳನ್ನು ಜಯಿಸಿದೆ.
ಸೀನಿಯರ್ ಮಹಿಳೆಯರ 60ಕೆ.ಜಿ.ಯೊಳಗಿನ ವಿಭಾಗದಲ್ಲಿ ಯೆನೆಪೊಯ ಫಿಸಿಯೊಥೆರಪಿ ವಿದ್ಯಾರ್ಥಿನಿ ಆರ್.ರಕ್ಷಾ ಎ., ಸೀನಿಯರ್ ಪುರುಷರ 55ಕೆ.ಜಿ.ಯೊಳಗಿನ ವಿಭಾಗದಲ್ಲಿ ಬ್ಯಾರೀಸ್ ಇಂಜಿನಿಯರಿಂಗ್ ವಿದ್ಯಾರ್ಥಿ ವಾಸಿಂ ಫಕ್ರುದ್ದೀನ್, ಸೀನಿಯರ್ 60ಕೆ.ಜಿ.ಯೊಳಗಿನ ವಿಭಾಗದಲ್ಲಿ ಶಫೀಕ್ ಕೆ.ಸಿ.ರೋಡ್, ಸೀನಿಯರ್ ಓವರ್ ವೈಟ್ ವಿಭಾಗದಲ್ಲಿ ಇರ್ಫಾನ್ ಉಪ್ಪಿನಂಗಡಿ, ಸಬ್ ಜೂನಿಯರ್ ವಿಭಾಗದ 31ಕೆ.ಜಿ. ವಿಭಾಗದಲ್ಲಿ ಮೆಲ್ಕಾರ್ ಕೌಡೇಲು ದಾರುಲ್ ಇಝ್ಝ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ತ್ವಾಹಾ ನಂದಾವರ, 10 ವರ್ಷ ಪ್ರಾಯ ವಿಭಾಗದಲ್ಲಿ ಅಗ್ರಹಾರ ಹೋಲಿ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಫಝಲ್ ತಲಪಾಡಿ ಹಾಗೂ ಬಂಟ್ವಾಳ ಕೆಳಗಿನಪೇಟೆಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಐವರು ವಿದ್ಯಾರ್ಥಿಗಳು ಚಿನ್ನ ಜಯಿಸಿದ್ದಾರೆ.
*ಚಿನ್ನ ವಿಜೇತ ತೌಹೀದ್ ಶಾಲೆಯ ವಿದ್ಯಾರ್ಥಿಗಳು: ಕೆಡೆಟ್ ಬಾಲಕರ 30ಕೆ.ಜಿ.ಯೊಳಗಿನ ವಿಭಾಗದಲ್ಲಿ ವಿಲಾಯತ್ ರಾಫಿ ಗೂಡಿನಬಳಿ, ಕೆಡೆಟ್ ಬಾಲಕರ 35ಕೆ.ಜಿ.ಯೊಳಗಿನ ವಿಭಾಗದಲ್ಲಿ ಇಶಾತ್ ಪರ್ಲಿಯಾ, ಜೂನಿಯರ್ 28ಕೆ.ಜಿ.ಯೊಳಗಿನ ವಿಭಾಗದಲ್ಲಿ ಮುಹಮ್ಮದ್ ಮುಹ್ಸಿನ್ ಪರ್ಲಿಯಾ, ಜೂನಿಯರ್ 25ಕೆ.ಜಿ.ಯೊಳಗಿನ ವಿಭಾಗದಲ್ಲಿ ಮುಹಮ್ಮದ್ ರೈಫಾನ್ ಶಾಂತಿಅಂಗಡಿ, ಮುಹಮ್ಮದ್ ರಾಝಿಕ್ ಕೈಕಂಬ. ಉಳಿದಂತೆ ಹದಿನೈದು ಮಂದಿ ಬೆಳ್ಳಿಯ ಪದಕ ಜಯಿಸಿದ್ದು ಹದಿನಾರು ಮಂದಿ ಕಂಚಿನ ಪದಕ ಜಯಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 600 ಕ್ರೀಡಾಳುಗಳು ಭಾಗವಹಿಸಿದ್ದರು. ಸ್ಪರ್ಧಾಳುಗಳಿಗೆ ರಾಜ್ಯ ಟ್ವೇಕಾಂಡೋ ಅಸೋಸಿಯೇಷನ್‌ನ ದ.ಕ.ಜಿಲ್ಲಾ ಸಮಿತಿಯ ಇಬ್ರಾಹೀಂ ನಂದಾವರ, ಶಿಹಾಬ್ ಟಿ., ಆಸಿಫ್ ಕಿನ್ಯಾ, ಇಸ್ಹಾಖ್ ನಂದಾವರ ತರಬೇತಿ ನೀಡಿದ್ದರು.







