Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಖ್ಯ ನ್ಯಾಯಾಧೀಶರ ಕಾರು ಚಾಲಕನಾಗಿ...

ಮುಖ್ಯ ನ್ಯಾಯಾಧೀಶರ ಕಾರು ಚಾಲಕನಾಗಿ ಶಿಷ್ಟಾಚಾರ ಅಧಿಕಾರಿಯ ಹುದ್ದೆಗೇರಿದ್ದ ವ್ಯಕ್ತಿಯೀಗ ಮತ್ತೆ ಚಾಲಕನಾದ

ವಾರ್ತಾಭಾರತಿವಾರ್ತಾಭಾರತಿ2 March 2017 4:33 PM IST
share
ಮುಖ್ಯ ನ್ಯಾಯಾಧೀಶರ ಕಾರು ಚಾಲಕನಾಗಿ ಶಿಷ್ಟಾಚಾರ ಅಧಿಕಾರಿಯ ಹುದ್ದೆಗೇರಿದ್ದ ವ್ಯಕ್ತಿಯೀಗ ಮತ್ತೆ ಚಾಲಕನಾದ

ಚಂಡಿಗಡ,ಮಾ.2: ರಾಜಬೀರ್ ಸಿಂಗ್ ತನ್ನ ವೃತ್ತಿಜೀವನದಲ್ಲಿ ಅದೃಷ್ಟದ ಕಮಾಲ್ ನಿಂದಾಗಿ ಕಾರು ಚಾಲಕ ಹುದ್ದೆಯಿಂದ ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಶಿಷ್ಟಾಚಾರ ಅಧಿಕಾರಿಯ ಹುದ್ದೆಯಲ್ಲಿ ಕುಳಿತಿದ್ದ. ಏಳು ವರ್ಷಗಳ ನಂತರ ಈಗ ಅದೇ ಅದೃಷ್ಟದ ಕಮಾಲ್‌ನಿಂದಾಗಿ ತಾನು ಎಲ್ಲಿಂದ ಪ್ರಾರಂಭಿಸಿದ್ದನೋ ಅಲ್ಲಿಗೇ ವಾಪಸಾಗಿದ್ದಾನೆ. ಮತ್ತದೇ ಕಾರು ಚಾಲಕ ಹುದ್ದೆ ಅವನಿಗೆ ಗಂಟು ಬಿದ್ದಿದೆ.

 ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಅಧಿಕೃತ ಕಾರಿನ ಚಾಲಕನಗಿದ್ದ ಸಿಂಗ್ 2005 ರಿಂದ 2015ರವರೆಗೆ ಕನಿಷ್ಠ 12 ಮುಖ್ಯ ನ್ಯಾಯಾಧೀಶರಿಂದ ತನ್ನ ವಾರ್ಷಿಕ ರಹಸ್ಯ ವರದಿಗಳಲ್ಲಿ ‘ಎ ಪ್ಲಸ್ ಔಟ್‌ಸ್ಟಾಂಡಿಂಗ್ ’ಗ್ರೇಡ್ ಕೃಪೆಯಿಂದಾಗಿ ಪಡೆದಿದ್ದ ಎಲ್ಲ ಬಡ್ತಿಗಳನ್ನು ಉಚ್ಚ ನ್ಯಾಯಾಲಯದ ಏಕ ನ್ಯಾಯಾಧೀಶ ಪೀಠವು ಬುಧವಾರ ಒಂದೇ ಹೊಡೆತಕ್ಕೆ ರದ್ದುಗೊಳಿಸಿಬಿಟ್ಟಿದೆ.

ಬಡ್ತಿಗೆ ಕಾಯುತ್ತಿದ್ದ ಇತರರನ್ನು ಕಡೆಗಣಿಸಿ 2010ರಲ್ಲಿ ಸಿಂಗ್‌ಗೆ ಹಿರಿಯ ಸಹಾಯಕನಾಗಿ ಬಡ್ತಿ ನೀಡಲಾಗಿತ್ತು ಮತ್ತು ಬಳಿಕ 2014, ಜುಲೈನಲ್ಲಿ ಅಧೀಕ್ಷಕ ದರ್ಜೆ-II  (ಉಪ ಅಧೀಕ್ಷಕ) ಕ್ಕೆ ಬಡ್ತಿಗೊಳಿಸಿ ಮುಖ್ಯ ನ್ಯಾಯಾಧೀಶರ ಶಿಷ್ಟಾಚಾರ ಅಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು. ಈಗ ನಿವೃತ್ತರಾಗಿರುವ ಆಗಿನ ಮುಖ್ಯ ನ್ಯಾಯಾಧೀಶ ಮುಕುಲ್ ಮುದ್ಗಲ್ ಅವರು 2010ರಲ್ಲಿ ಸಿಂಗ್‌ಗೆ ಬಡ್ತಿ ನೀಡಿದ್ದರೆ, ನಂತರದ ಬಡ್ತಿಯನ್ನು ಆಗ ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್.ಕೆ.ಕೌಲ್ ಅವರು ಮದ್ರಾಸ್ ಉಚ್ಚ ನ್ಯಾಯಾಲಯ ಕ್ಕೆ ತನ್ನ ವರ್ಗಾವಣೆಗೆ ಮುನ್ನ ನೀಡಿದ್ದರು. ಕೌಲ್ ಹಾಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿದ್ದಾರೆ.

ಸಿಂಗ್ ಬಡ್ತಿಯನ್ನು ಸಮರ್ಥಿಸಿಕೊಂಡಿದ್ದ ಹೈಕೋರ್ಟ್ ಆಡಳಿತವು, ಮುಖ್ಯ ನ್ಯಾಯಾಧೀಶರು ಅಗತ್ಯಕ್ಕನುಗುಣವಾಗಿ ಯಾವುದೇ ವ್ಯಕ್ತಿಯನ್ನು ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಹುದ್ದೆಗೆ ನೇಮಕಗೊಳಿಸುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಿತ್ತು.

ಸಿಂಗ್‌ಗೆ ನೀಡಿದ್ದ ಬಡ್ತಿಗಳನ್ನು ಉಚ್ಚ ನ್ಯಾಯಾಲಯದ 18 ಹಿರಿಯ ಸಹಾಯಕರು ಪ್ರಶ್ನಿಸಿದ್ದರು. ಇವರೆಲ್ಲರನ್ನು ಕಡೆಗಣಿಸಿ ಸಿಂಗ್‌ಗೆ ಬಡ್ತಿ ನೀಡಲಾಗಿತ್ತು.

ಸಿಂಗ್‌ಗೆ ಬಡ್ತಿ ನೀಡಲಾಗಿದ್ದ ದಿನಾಂಕದಿಂದ ತಮಗೆ ಬಡ್ತಿಗೆ ನಿರ್ದೇಶ ಕೋರಿದ್ದ ಅರ್ಜಿದಾರರು ಸೇವಾ ನಿಯಮಾವಳಿಗಳ ಅನ್ವಯ ಚಾಲಕ ಹುದ್ದೆಯಲ್ಲಿರುವ ವ್ಯಕ್ತಿಗೆ ಹಿರಿಯ ಸಹಾಯಕನ ಹುದ್ದೆಗೆ ಬಡ್ತಿ ನೀಡುವಂತಿಲ್ಲ, ಆತನಿಗೆ ನೀಡಬಹುದಾದ ಅತ್ಯುನ್ನತ ಹುದ್ದೆಯೆಂದರೆ ಚಾಲಕರ ಸೂಪರ್‌ವೈಸರ್ ಮಾತ್ರ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X